Print 
asha bhosle,

User Rating: 0 / 5

Star inactiveStar inactiveStar inactiveStar inactiveStar inactive
 
asha bhosle
Asha Bhosle sings again in Kannada

ಭಾರತೀಯ ಚಿತ್ರರಂಗದ ಜನಪ್ರಿಯ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. 19/11 ಎಂಬ ಹೊಸ ಕನ್ನಡ ಚಿತ್ರಕ್ಕೆ ಭೋಂಸ್ಲೆ ಹಾಡಿದ್ದಾರೆ. ಜೋಯೆಲ್‌ ಮತ್ತು ಅಭಿಲಾಷ್‌ ಸಂಗೀತ ನಿರ್ದೇಶನದಲ್ಲಿ "ಕಣ್ಣುಕಣ್ಣಲಿ ಬಣ್ಣಬಣ್ಣದ ಕನಸನ್ನು ಕೊಡ್ತಾಳಲ್ಲ .ಎಂಬ ಹಾಡಿಗೆ ಧ್ವನಿಯಾಗಿದ್ದಾರೆ ಆಶಾ. ಆಶಾ ಅವರ ಜೊತೆ ಹಾಡಿರುವುದು ಚೇತನ್‌ ನಾಯಕ್‌. ಮುಂಬೈನಲ್ಲಿ ಹಾಡಿನ ಧ್ವನಿಮುದ್ರಣವಾಗಿದೆಯಂತೆ.

ಆಶಾ ಭೋಂಸ್ಲೆ ಕನ್ನಡದಲ್ಲಿ ಮೊದಲು ಹಾಡಿದ್ದು ದೂರದ ಬೆಟ್ಟ ಚಿತ್ರದಲ್ಲಿ. ಸವಾಲು ಹಾಕಿ ಸೋಲಿಸಿ ಎಲ್ಲರ ಹಾಡಿಗೆ ಧ್ವನಿಯಾಗಿದ್ದರು. ಅದಾದ ಮೇಲೆ ಶ್ರೀನಗರ ಕಿಟ್ಟಿ ಅಭಿನಯದ "ಮತ್ತೆ ಮುಂಗಾರು' ಚಿತ್ರದಲ್ಲಿ  ಹೇಳದೆ ಕಾರಣ ಹಾಡು ಹಾಡಿದ್ದರು. ಆಗ ವೀರ್‌ ಸಮರ್ಥ್ ಸಂಗೀತ ನಿರ್ದೇಶನದಲ್ಲಿ "ಮಾಣಿಕ್ಯ' ಎಂಬ ಚಿತ್ರಕ್ಕೂ ಆಶಾ ಭೋಂಸ್ಲೆ ಹಾಡಿದ್ದರು.ಆದರೆ, ಆ ಚಿತ್ರ ಶುರುವಾಗಲಿಲ್ಲ. ನಂತರ ಮಾಣಿಕ್ಯ ಹೆಸರಲ್ಲಿ ಸುದೀಪ್ ಸಿನಿಮಾ ಮಾಡಿದರು. ಈಗ ಆರ್ಯನ್‌ ಎಂ ಪ್ರತಾಪ್‌ ನಿರ್ದೇಶನದ 19/11 ಚಿತ್ರದಲ್ಲಿ ಮತ್ತೆ ಆಶಾ ಕನ್ನಡದ ಹಾಡು ಹಾಡಿದ್ದಾರೆ.