` ಮುತ್ತಣ್ಣ ಮತ್ತೆ ಪೀಪಿ ಊದುವ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
muttanna to re release
Shivarajkumar In Muttanna

ಮುತ್ತಣ್ಣ ಪೀಪಿ ಊದುವ ಹಾಡು ಕೇಳಿದರೆ ಸಾಕು, ಮುತ್ತಣ್ಣ ಸಿನಿಮಾ ನೆನಪಾಗಿಬಿಡುತ್ತೆ. 23 ವರ್ಷಗಳ ಹಿಂದೆ ಶಿವರಾಜ್ ಕುಮಾರ್ ದ್ವಿಪಾತ್ರದಲ್ಲಿ ನಟಿಸಿದ್ದ ಚಿತ್ರ ಅದು. ಶಶಿಕುಮಾರ್, ಸುಪ್ರಿಯಾ ನಟಿಸಿದ್ದ ಚಿತ್ರದಲ್ಲಿ ಭವ್ಯಶ್ರೀ ರೈ ಶಿವಣ್ಣನ ತಂಗಿಯಾಗಿ ಕಾಣಿಸಿಕೊಂಡಿದ್ದರು. ಆ ಸಿನಿಮಾ ಮತ್ತೆ ರಿಲೀಸ್ ಆಗ್ತಾ ಇದೆ. ಇದೇ ಸೆಪ್ಟೆಂಬರ್ 22ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.

2ಕೆ ರೆಜಲ್ಯೂಷನ್ ಹೈ ಟೆಕ್ನಾಲಜಿ ಅಳವಡಿಸಿಕೊಂಡು ಬರುತ್ತಿರುವ ಚಿತ್ರವನ್ನು  7.1 ಸೌಂಡ್​ನಲ್ಲಿ ಮತ್ತೆ ತೆರೆಗೆ ತರುತ್ತಿದ್ದಾರೆ ನಿರ್ಮಾಪಕ ಸೋಮಣ್ಣ ಗೌಡ. ಅಣ್ಣತಂಗಿ ಸೆಂಟಿಮೆಂಟ್​ನ ಆ ಚಿತ್ರ ನಿರ್ದೇಶಿಸಿದ್ದವರು ಎಂ.ಎಸ್. ರಾಜಶೇಖರ್. ಅಂಗವಿಕಲ ತಂಗಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಎಂದು ಕನಸು ಕಾಣುವ ಅಣ್ಣ ಹಾಗೂ ಕಳ್ಳ, ಎರಡೂ ಪಾತ್ರಗಳಲ್ಲಿ ಶಿವರಾಜ್ ಕುಮಾರ್ ಮಿಂಚಿದ್ದರು. ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು.

ಶಿವರಾಜ್​ ಕುಮಾರ್ ಚಿತ್ರಗಳು ರೀ-ರಿಲೀಸ್ ಆಗುವುದು ಹೊಸದೇನಲ್ಲ. ಅವರ ಓಂ ಚಿತ್ರ, ಕನ್ನಡದಲ್ಲಿ ಅತಿ ಹೆಚ್ಚು ಬಾರಿ ರೀ-ರಿಲೀಸ್ ಆದ ಚಿತ್ರ ಎಂಬ ದಾಖಲೆ ಬರೆದಿದೆ. ಈಗ ಮುತ್ತಣ್ಣನ ಸರದಿ.

I Love You Movie Gallery

Rightbanner02_butterfly_inside

Paddehuli Movie Gallery