` ಹಸಿದಿರುವ ಜಗ್ಗೇಶ್​ಗೆ ಸಿಕ್ಕಿದೆ ಅದ್ಭುತ ಪಾತ್ರ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
jaggesh's new movie
Jaggesh's new movie 8MM

ಜಗ್ಗೇಶ್ ಅವರನ್ನು ಅಭಿಮಾನಿಗಳು ಕರೆಯೋದು ನವರಸ ನಾಯಕ ಅಂತ. ಆದರೆ, ನವರಸಗಳನ್ನೂ ಹೊಮ್ಮಿಸಬಲ್ಲ ಅದ್ಭುತ ತಾಕತ್ತಿರುವ ಜಗ್ಗೇಶ್​ಗೆ ಇದುವರೆಗೆ ಕ್ರೈಂ ಪಾತ್ರಗಳು ಮಿಸ್ಸಾಗಿದ್ದವು. ಈಗ, ಇಷ್ಟು ವರ್ಷಗಳ ನಂತರ ಅಂಥಾದ್ದೊಂದು ಪಾತ್ರಕ್ಕಾಗಿ ಹಸಿದು ಕುಳಿತಿದ್ದ ಜಗ್ಗೇಶ್​ಗೆ 8MM ಎಂಬ ಚಿತ್ರದಲ್ಲೊಂದು ಅದ್ಭುತ ಅವಕಾಶ ಸಿಕ್ಕಿದೆ

ಸತತ 2 ವರ್ಷಗಳಿಂದ ಜಿಮ್​ನಲ್ಲಿ ನಿರಂತರ ಬೆವರು ಹರಿಸುತ್ತಿರುವ ಜಗ್ಗೇಶ್, ಈಗ ಸಿಕ್ಕಾಪಟ್ಟೆ ಸ್ಲಿಮ್ ಆಗಿಬಿಟ್ಟಿದ್ದಾರೆ. 8MM ಚಿತ್ರದ ಪೋಸ್ಟರ್​ನಲ್ಲಿ ಅದು ಅದ್ಭುತವಾಗಿ ಕಾಣುತ್ತಿದೆ. ಜಗ್ಗೇಶ್ ಅವರ ನಗುಮೊಗವನ್ನೇ ನೋಡಿದವರಿಗೆ, ರಿವಾಲ್ವರ್ ಹಿಡಿದು ನಿಂತಿರುವ ಜಗ್ಗೇಶ್​ ಅವರ ಚಿತ್ರ ಹೊಸದಾಗಿ ಕಾಣಿಸಬಹುದೇನೋ. ಆದರೆ, ಡಿಫರೆಂಟಾಗಂತೂ ಇದೆ.

8MM ಎಂದರೆ, ಅದು ಬುಲೆಟ್​ನ ಸೈಜ್. ಚಿತ್ರದ ಪೋಸ್ಟರ್ ನೋಡಿದವರೆಲ್ಲ ಏನಿದು ಸರ್ ಎಂದು ಕೇಳುತ್ತಿರುವುದಕ್ಕೇ ಜಗ್ಗೇಶ್ ಥ್ರಿಲ್ಲಾಗಿ ಹೋಗಿದ್ದಾರೆ. ಸೆಪ್ಟೆಂಬರ್ 22ಕ್ಕೆ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಲಿರುವುದು ರಾಕಿಂಗ್ ಸ್ಟಾರ್ ಯಶ್.

Trayambakam Movie Gallery

Rightbanner02_butterfly_inside

Paddehuli Movie Gallery