` ನಟಿ ಬಿ.ವಿ. ರಾಧಾ ನಿಧನ - ಸಾವಿನಲ್ಲೂ ಸಾರ್ಥಕತೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
senior actress bv radha
BV Radha Image

ಕನ್ನಡದ ಹಿರಿಯ ನಟಿ ಬಿ.ವಿ.ರಾಧಾ ನಿಧನರಾಗಿದ್ದಾರೆ. ಕನ್ನಡದ ಹಿರಿಯ ನಿರ್ದೇಶಕ ಕೆಎಸ್‍ಎಲ್ ಸ್ವಾಮಿ ಅವರ ಪತ್ನಿಯಾಘಿದ್ದ ಬಿ.ವಿ. ರಾಧಾ, 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. 

ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್‍ಗೆ ತುತ್ತಾಗಿದ್ದ ಬಿ.ವಿ. ರಾಧಾ, ಹೋರಾಟ ನಡೆಸುತ್ತಲೇ ಇದ್ದರು. ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಪತಿ ಕೆಎಸ್‍ಎಲ್ ಸ್ವಾಮಿ ನಿಧನದ ನಂತರ ಏಕಾಂಗಿಯಾಗಿದ್ದ ರಾಧಾ, ಪುತ್ರಿ ಧನಲಕ್ಷ್ಮಿಯನ್ನು ಅಗಲಿದ್ದಾರೆ.

ಹೊರಮಾವಿನಲ್ಲಿರುವ ನಿವಾಸದಲ್ಲಿ ಪಾರ್ಥಿವ ಶರೀರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಅವರ ಅಂತಿಮ ಆಸೆಯಂತೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದೇಹದಾನ ಮಾಡಲಾಗುವುದು. ಈ ಮೂಲಕ ಬಿ.ವಿ. ರಾಧಾ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಡಾ. ರಾಜ್‍ಕುಮಾರ್ ಅಭಿನಯದ ನವಕೋಟಿ ನಾರಾಯಣ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಬಿ.ವಿ. ರಾಧಾ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಚಿತ್ರ ನಿರ್ಮಾಪಕಿಯೂ ಆಗಿದ್ದ ಬಿ.ವಿ. ರಾಧಾ ಹರಕೆಯ ಕುರಿ & ಜಂಬೂ ಸವಾರಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ರಾಷ್ಟ್ರಪ್ರಶಸ್ತಿ ವಿಜೇತೆಯೂ ಹೌದು..

ಆರು ಮೂರು ಒಂಭತ್ತು, ಬಲೇ ಅದೃಷ್ಟವೋ ಅದೃಷ್ಟ, ಯಾವ ಜನ್ಮದ ಮೈತ್ರಿ, ದೇವರು ಕೊಟ್ಟ ತಂಗಿ, ಮಿಥಿಲೆಯ ಸೀತೆಯರು ಚಿತ್ರಗಳಲ್ಲಿ ನಾಯಕಿ, 2ನೇ ನಾಯಕಿಯಾಗಿ ನಟಿಸಿದ್ದರು.

ಡಾ. ರಾಜ್, ಶಿವಾಜಿ ಗಣೇಶನ್, ಎನ್‍ಟಿಆರ್, ಎಂಜಿಆರ್, ಜೆಮಿನಿ ಗಣೇಶನ್, ಶಿವಾಜಿ ಗಣೇಶನ್, ಎಎನ್‍ಆರ್ ಸೇರಿದಂತೆ ದಕ್ಷಿಣ ಭಾರತದ ಖ್ಯಾತನಾಮರ ಜೊತೆ ನಟಿಸಿದ್ದರು ಬಿ.ವಿ. ರಾಧಾ. ಕುಂಕುಮ ಭಾಗ್ಯ, ಚಿ.ಸೌ. ಸಾವಿತ್ರಿ, ಪುನರ್‍ವಿವಾಹ ಅವರು  ಆಭಿನಯಿಸಿದ್ದ ಧಾರಾವಾಹಿಗಳು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery