ಯೋಗರಾಜ್ ಭಟ್ ಮತ್ತು ಗಣೇಶ್ ಪುನರ್‍ಮಿಲನದ ಮುಗುಳುನಗೆ ಈಗಾಗಲೇ ರಾಜ್ಯಾದ್ಯಂತ ಭರ್ಜರಿ ಸದ್ದು ಮಾಡುತ್ತಿದೆ. ಮುಂಗಾರು ಮಳೆಯ ಮೋಡಿ ಮತ್ತೆ ಸೃಷ್ಟಿಯಾಗುವ ಹಾದಿಯಲ್ಲಿದೆ. ಹೀಗಿರುವಾಗಲೇ ಮುಗುಳುನಗೆ ಅಮೆರಿಕ ಮತ್ತು ಕೆನಡಾದಲ್ಲಿ ರಿಲೀಸ್‍ಗೆ ರೆಡಿಯಾಗಿದೆ. ಕನ್ನಡದ ಹಲವು ಚಿತ್ರಗಳು ಈಗ ಅಮೆರಿಕ, ಕೆನಡಾ ಸೇರಿದಂತೆ ವಿದೇಶಗಳಲ್ಲಿ ರಿಲೀಸ್ ಆಗುವುದು ಹೊಸದೇನಲ್ಲವಲ್ಲ. ಇದರಲ್ಲೇನಿದೆ ವಿಶೇಷ ಅಂತೀರಾ. ವಿಶೇಷ ಇರೋದು ಇಲ್ಲೆ. ದಾಖಲೆ ಸಂಖ್ಯೆಯ ಸ್ಕ್ರೀನ್‍ಗಳಲ್ಲಿರಿಲೀಸ್ ಆಗುತ್ತಿರುವುದೇ ಮುಗುಳುನಗೆ ದಾಖಲೆ.
ಅಮೆರಿಕವೊಂದರಲ್ಲೇ 50 ಸ್ಕ್ರೀನ್‍ಗಳಲ್ಲಿ ತೆರೆ ಕಾಣುತ್ತಿರುವ ಮುಗುಳುನಗೆ, ಕೆನಡಾದಲ್ಲಿ ಕೂಡಾ 4 ಸ್ಕ್ರೀನ್‍ಗಳಲ್ಲಿ ತೆರೆ ಕಾಣುತ್ತಿದೆ.
ಅಮೆರಿಕದ ಲಾಸ್ ಏಂಜಲೀಸ್, ಸೀಟಲ್, ಡಲ್ಲಾಸ್, ಹೂಸ್ಟನ್, ಡೆಟ್ರಾಯಿಟ್, ಒರ್ಲಾಂಡೋ, ವಾಷಿಂಗ್ಟನ್ ಡಿಸಿ, ಅಟ್ಲಾಂಟಾನ್ಯೂಯಾರ್ಕ್, , ಆಸ್ಟಿನ್ ಮೊದಲಾದ ನಗರಳಲ್ಲಿ ಹಾಗೂ ಕೆನಡಾದ ಒಟ್ಟಾವ, ಮಾಂಟ್ರಿಯಲ್, ಟೊರಂಟೋ ಹಾಗೂ ಕ್ಯಾಲ್‍ಗ್ರೇ ನಗರಗಳಲ್ಲಿ ತೆರೆ ಕಾಣುತ್ತಿದೆ.
ಸೈಯದ್ ಸಲಾಮ್, ಗೋಲ್ಡನ್ ಮೂವೀಸ್ ಹಾಗೂ ಯೋಗರಾಜ್ ಮೂವೀಸ್ ನಿರ್ಮಾಣದ ಮುಗುಳುನಗೆ, ಕರ್ನಾಟಕದಲ್ಲಿ ದಾಖಲೆ ಬರೆಯುತ್ತಿದೆ. ಅಮೆರಿಕದಲ್ಲಿ ಮುಗುಳುನಗೆ ಚಿತ್ರವನ್ನು ವಿತರಣೆ ಮಾಡುತ್ತಿರುವುದು ಕಸ್ತೂರಿ ಮೀಡಿಯಾ, ಡ್ರೀಮ್ಸ್ ಮೀಡಿಯಾ ಹಾಗೂ ತಾನಿಶ್ ಮೀಡಿಯಾ.
ಕಳೆದ 2 ವರ್ಷಗಳಲ್ಲಿ ಅಮೆರಿಕದಲ್ಲಿ ಕನ್ನಡ ಸಿನಿಮಾಗಳ ಪ್ರದರ್ಶನ ಚೆನ್ನಾಗಿ ನಡೆಯುತ್ತಿದೆ. ಇದುವರೆಗಿನ ಅಮೆರಿಕದಲ್ಲಿ ಸೂಪರ್ ಹಿಟ್ ಆಗಿರುವ ಕನ್ನಡ ಚಿತ್ರ ಎಂಬ ದಾಖಲೆ, ಈಗಲೂ ರಂಗಿತರಂಗದ ಹೆಸರಲ್ಲಿದೆ. ಆ ದಾಖಲೆಯನ್ನು ಮಗುಳುನಗೆ ಮುರಿಯುತ್ತಾ..?
Related Articles :-