ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್. ಬುಲ್‍ಬುಲ್ ರಚಿತಾ ಎಂದೇ ಕರೆಸಿಕೊಳ್ಳುವ ಬೆಡಗಿ ರಚಿತಾ. ಅವರ ಇನ್ನೊಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಆದರೆ, ರಚಿತಾ ರಾಮ್ ನಟಿಸುವುದು ಸ್ಟಾರ್‍ಗಳ ಜೊತೆ ಮಾತ್ರಾನಾ..? ಇದು ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ.
ರಚಿತಾ ರಾಮ್ ಚಿತ್ರರಂಗ ಪ್ರವೇಶಿಸಿದ್ದು 2013ರಲ್ಲಿ. ಅದೂ ಚಾಲೆಂಜಿಂಗ್ ಸ್ಟಾರ್ ಜೊತೆ, ಬುಲ್ ಬುಲ್ ಚಿತ್ರದ ಮೂಲಕ. ಆ ಚಿತ್ರದಿಂದಲೇ ರಚಿತಾರಾಮ್ ಬುಲ್‍ಬುಲ್ ರಚಿತಾ ಎಂದು ಗುರುತಿಸಿಕೊಂಡರು. ಈ ನಾಲ್ಕು ವರ್ಷಗಳಲ್ಲಿ ಅವರು ನಟಿಸಿರುವುದು 8 ಚಿತ್ರಗಳಲ್ಲಿಮಾತ್ರ. ಮತ್ತು ಎಲ್ಲವೂ ಸ್ಟಾರ್ ಚಿತ್ರಗಳು.
ನೀವೇ ನೋಡಿ. ದರ್ಶನ್ ಜೊತೆ ಎರಡು ಚಿತ್ರ (ಬುಲ್‍ಬುಲ್, ಅಂಬರೀಷ), ಪುನೀತ್ ರಾಜ್‍ಕುಮಾರ್(ಚಕ್ರವ್ಯೂಹ), ಸುದೀಪ್(ರನ್ನ), ಶ್ರೀಮುರಳಿ(ರಥಾವರ),ದಿಲ್ ರಂಗೀಲಾ(ಗಣೇಶ್),ಪುಷ್ಪಕವಿಮಾನ(ರಮೇಶ್ ಅರವಿಂದ್), ಭರ್ಜರಿ(ಧ್ರುವ ಸರ್ಜಾ), ಉಪ್ಪಿರುಪ್ಪಿ(ಉಪೇಂದ್ರ).. ಹೀಗೆ ನಟಿಸಿರುವ ಮತ್ತು ನಟಿಸುತ್ತಿರುವ ಚಿತ್ರಗಳೆಲ್ಲ ಸ್ಟಾರ್ ಚಿತ್ರಗಳೇ.
ಇನ್ನು ಅತಿಥಿ ನಟಿಯಾಗಿ ಕಾಣಿಸಿಕೊಂಡ ಜಗ್ಗುದಾದ, ಮುಕುಂದ ಮುರಾರಿ ಚಿತ್ರಗಳೂ ಕೂಡಾ ಸ್ಟಾರ್ ಹೀರೋಗಳಿದ್ದ ಚಿತ್ರಗಳೇ. ಹೀಗಾಗಿಯೇ ರಚಿತಾ ರಾಮ್ ಓನ್ಲಿ ಫಾರ್ ಸ್ಟಾರ್ ಹೀರೋಸ್ ಎನ್ನುತ್ತಿರುವುದು. ಚಿತ್ರರಂಗಕ್ಕೆ ಬಂದು 4 ವರ್ಷ ಕಳೆದು, 8 ಚಿತ್ರಗಳಲ್ಲಿ ಹೀರೋಯಿನ್ ಆಗಿ ನಟಿಸಿದರೂ, ಅವುಗಳಲ್ಲಿ ಒಂದೇ ಒಂದು ಹೊಸಬರ ಚಿತ್ರವಿಲ್ಲ ಎನ್ನುವುದೇ ಇದಕ್ಕೆ ಕಾರಣ.