ಪ್ರತಿಯೊಬ್ಬರಿಗೂ ಗುರುಗಳಿರುತ್ತಾರೆ. ಗುರುಗಳ ಮೂಲಕವೇ ದೊಡ್ಡದೊಂದು ಸಾಧನೆಯ ಮೆಟ್ಟಿಲೇರುವುದು ಸಾಧ್ಯ. ಅಂಥಾ ಗುರುಗಳು ಧೃವ ಸರ್ಜಾ ಮತ್ತು ರಚಿತಾ ರಾಮ್‍ಗೂ ಇದ್ದಾರೆ. ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಇಬ್ಬರೂ ಹೇಳಿಕೊಂಡಿರುವ ವಿಷಯಗಳು ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್.
ನಿಮಗೆಲ್ಲ ಗೊತ್ತಿರುವಂತೆ ಕನ್ನಡದ ಖ್ಯಾತ ಖಳನಟ ಶಕ್ತಿಪ್ರಸಾದ್, ಶಿಕ್ಷಕರೂ ಆಗಿದ್ದವರು. ಹಾಗೆ ಶಿಕ್ಷಕರಾಗಿದ್ದವರ ಬಳಿ ಶಿಷ್ಯನಾಗಿದ್ದವರು ರಚಿತಾ ರಾಮ್ ತಂದೆ. ಧೃವ ಸರ್ಜಾ ಅವರ ತಾತ, ನನ್ನ ಅಪ್ಪನಿಗೆ ಮೇಷ್ಟ್ರು ಅನ್ನೋದನ್ನು ಖುಷಿಯಿಂದ ಹೇಳಿಕೊಂಡಿದ್ದಾರೆ ರಚಿತಾ ರಾಮ್.
ಇನ್ನು ಧೃವ ಸರ್ಜಾಗೆ ಕೂಡಾ ಮೊದಲ ಗುರು ಮತ್ತು ಸ್ಫೂರ್ತಿ ಅವರ ತಾತ. ಇಂತಹ ಧೃವ ಚಿಕ್ಕವನಿದ್ದಾಗ ರಚಿತಾ ರಾಮ್ ತಂದೆ ಕೈಲಿ ಏಟನ್ನೂ ತಿಂದಿದ್ದಾರಂತೆ. ಏಕೆಂದರೆ ಅವರು ಡ್ಯಾನ್ಸ್ ಟೀಚರ್ ಆಗಿದ್ದವರು. ವಾಲಿಬಾಲ್ ಆಡುವಾಗ ಬಾಲು ಪದೇ ಪದೇ ಅವರ ಡ್ಯಾನ್ಸ್ ಸ್ಕೂಲ್ ಆವರಣಕ್ಕೆ ಹೋಗಿ ಬೀಳುತ್ತಿತ್ತಂತೆ. ಧೃವ ಹೋಗಿ ಬಾಲ್ ತೆಗೆದುಕೊಂಡು ಬರುತ್ತಿದ್ದರಂತೆ. ನಿನಗೆ ನಮ್ಮಪ್ಪ ಹೊಡೆದಿದ್ದಾರಂತೆ ಗೊತ್ತಾ ಅಂದ್ರೆ, ನಾವ್ ಬಿಡಿ.. ತುಂಬಾ ಮೇಷ್ಟ್ರು ಕೈಲಿ ಏಟು ತಿಂದಿದ್ದೀವಿ. ಹೊಡೆದಿದ್ದರೂ ಹೊಡೆದಿರಬಹುದು ಎಂದು ನಗುತ್ತಾರೆ ಧೃವಾ.
ಹೀಗಾಗಿಯೇ ಧೃವ ಸರ್ಜಾ ಮತ್ತು ರಚಿತಾ ರಾಮ್, ಶಿಕ್ಷಕರ ದಿನಾಚರಣೆಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ.