` ಸಂಸ್ಕøತದಲ್ಲೂ..ಶಾಲೆಯಲ್ಲೂ..ಬೊಂಬೆ ಹೇಳುತೈತೆ ಮತ್ತೆ ಮತ್ತೆ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
raajkumara movie image
Bombe Heluthaite in Sanskrit

ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಡು ಹುಟ್ಟುಹಾಕಿದ ಟ್ರೆಂಡ್ ಕನ್ನಡ ಚಿತ್ರರಸಿಕರಿಗೆಲ್ಲ ಗೊತ್ತಿರುವ ವಿಚಾರವೇ. ಈ ಹಾಡಿನ ಇನ್ನಷ್ಟು ಕಥೆಗಳನ್ನು ಹೇಳಿಕೊಂಡಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಮ್.

ಬೊಂಬೆ ಹೇಳುತೈತೆ ಹಾಡನ್ನು ಅಮೆರಿಕದಲ್ಲಿನ ಇಬ್ಬರು ಪುಟ್ಟ ಅಕ್ಕ-ತಮ್ಮ ಸೇರಿಕೊಂಡು ಸಂಸ್ಕøತದಲ್ಲಿ ಭಾಷಾಂತರ ಮಾಡಿ, ಹಾಡನ್ನು ಬಿಡುಗಡೆಯೂ ಮಾಡಿದ್ದಾರಂತೆ. ಸಂಸ್ಕøತ ಶಾಲೆಗಳಲ್ಲಿ ಕೂಡಾ ಈಗ ಈ ಹಾಡು ಜನಪ್ರಿಯವಾಗಿಬಿಟ್ಟಿದೆ. 

ಇನ್ನು ಬೆಳಗಾವಿಯಲ್ಲಿ ಸರ್ಕಾರಿ ಶಾಲೆಯೊಂದರ ಮಕ್ಕಳು, ಶಾಲೆ ಬಿಟ್ಟವರನ್ನು ಮರಳಿ ಕರೆತರಲು ಹಾಡಿನ ಸಾಹಿತ್ಯವನ್ನು ಬದಲಾಯಿಸಿ, ಅದೇ ಟ್ಯೂನ್‍ನಲ್ಲಿ ಹಾಡಿರುವುದೂ ಸಂತೋಷ್ ಅವರಿಗೆ ಗೊತ್ತಾಗಿದೆ. ಹೀಗೆ ರಾಜಕುಮಾರ ಚಿತ್ರದ ಹಾಡಿನ 200ಕ್ಕೂ ಹೆಚ್ಚು ಕವರ್ ವರ್ಷನ್ ಬಂದಿವೆ ಎಂದು ಖುಷಿ ಹಂಚಿಕೊಂಡಿದ್ದಾರೆ ಸಂತೋಷ್ ಆನಂದ್ ರಾಮ್.