` ಕಿಚ್ಚನ ಬಯಕೆ ಈಡೇರಿಸಲು ಅಭಿಮಾನಿಗಳು ಸನ್ನದ್ಧ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep
Sudeep Fans Make It Real

ಸುದೀಪ್ ಹುಟ್ಟುಹಬ್ಬ ನಾಳೆ. ಸೆಪ್ಟೆಂಬರ್ 2ರಂದು ಹುಟ್ಟುಹಬ್ಬ ಆಚರಿಸುತ್ತಿರುವ ಸುದೀಪ್, ಸದ್ಯಕ್ಕೆ ಭಾರತದಲ್ಲಿಲ್ಲ. ಹುಟ್ಟುಹಬ್ಬಕ್ಕೆ  ಸುಮಾರು ಎರಡು ತಿಂಗಳು ಮೊದಲೇ ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬದ ದಿನ ಕೇಕ್, ಅಲಂಕಾರಕ್ಕೆ ದುಂದುವೆಚ್ಚ ಮಾಡಬೇಡಿ. ಅದರ ಬದಲು ಹಸಿದವರಿಗೆ, ನಿರ್ಗತಿಕರಿಗೆ ಆಸರೆ ನೀಡಿ ಎಂದು ಮನವಿ ಮಾಡಿದ್ದರು. ಅದಾದ ಮೇಲೆ ಟಿವಿ ಸಂದರ್ಶನದಲ್ಲೂ ಹೇಳಿದ್ದರು. ಸುದೀಪ್‍ರ ಈ ಕನಸನ್ನು ಅಭಿಮಾನಿಗಳು ಸಾಕಾರಗೊಳಿಸಲು ಹೊರಟಿದ್ದಾರೆ.

ಅಖಿಲ ಕರ್ನಾಟಕದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಸೇನಾ ಸಮಿತಿಯವರು ಕಿಚ್ಚನ ಹುಟ್ಟುಹಬ್ಬದ ಸಲುವಾಗಿ ಅನ್ನಸಂತರ್ಪಣೆ, ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಂಡಿದ್ದಾರೆ. ಸತಸ್ಯಂಗ ವಿದ್ಯಾಸಂಸ್ಥೆಯ ವಿಕಲಚೇತನ ಅನಾಥ ಮಕ್ಕಳಿಗೆ ಧನಸಹಾಯ, ಸಂರಕ್ಷಣಾ ಚಾರಿಟಬಲ್ ಟ್ರಸ್ಟ್‍ನ ಅನಾಥಾಶ್ರಮ ಹಾಗೂ ಸಿಟಿಜನ್ಸ್ ಸೇವಾಶ್ರಮ ಅನಾಥಾಶ್ರಮಕ್ಕೆ ಧನಸಹಾಯ ಮಾಡುತ್ತಿದ್ದಾರೆ.

ಇದೆಲ್ಲ ಕಾರ್ಯಕ್ರಮಗಳಿಗೆ ಬೆಂಗಳೂರಿನ ನಾಗರಭಾವಿ ಸರ್ಕಲ್‍ನಲ್ಲಿ ವೇದಿಕೆ ಸಿದ್ಧಗೊಂಡಿದೆ. ಮಧ್ಯಾಹ್ನ 12 ಗಂಟೆಯ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತವಿದೆ.

ಹಸಿದವರು ಸಂತೃಪ್ತಿಯಿಂದ ಹರಸಿದರೆ, ನೆರವು ಪಡೆದ ಆ ಮಕ್ಕಳ ಕಣ್ಣಲ್ಲಿ ಮಿಂಚು ಮಿನುಗಿದರೆ, ಸುದೀಪ್ ಹುಟ್ಟುಹಬ್ಬದ ದಿನ ನಡೆದ ರಕ್ತದಾನ ಶಿಬಿರದ ನೆರವಿನಿಂದ ಯಾವುದೋ ಜೀವ ಉಳಿದರೆ, ಆ ಹಾರೈಕೆ ಸುದೀಪ್‍ಗೆ. ಸುದೀಪ್ ನೂರ್ಕಾಲ ಬಾಳಲಿ.

Chemistry Of Kariyappa Movie Gallery

BellBottom Movie Gallery