` ದರ್ಶನ್ ರಾಜಕೀಯ - ದಿನಕರ್ ತೂಗುದೀಪ್ ಹೇಳಿದ್ದೇನು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dinakar reacts
Darshan, Dinakar Image

ದರ್ಶನ್ ರಾಜಕೀಯಕ್ಕೆ ಬರೋದಿಲ್ಲ. ಅವನಿಗೂ, ರಾಜಕೀಯಕ್ಕೂ ಆಗಿ ಬರೋದಿಲ್ಲ. ದರ್ಶನ್, ರಾಜಕಾರಣಕ್ಕೆ ಸೂಕ್ತ ವ್ಯಕ್ತಿಯಲ್ಲ. 200% ಹೇಳುತ್ತೇನೆ. ದರ್ಶನ್ ರಾಜಕೀಯಕ್ಕೆ ಬರಲ್ಲ. ಇಂಥಾದ್ದೊಂದು ಪ್ರತಿಕ್ರಿಯೆ ನೀಡಿರೋದು ದರ್ಶನ್ ತಮ್ಮ ದಿನಕರ್ ತೂಗುದೀಪ್. 

ತಮ್ಮ ಲೈಫ್ ಜೊತೆ ವಿತ್ ಒಂದ್ ಸೆಲ್ಫಿ ಚಿತ್ರದ ಮುಹೂರ್ತದಲ್ಲಿ ದಿನಕರ್ ಈ ಮಾತು ಹೇಳಿದ್ದಾರೆ. ದರ್ಶನ್ ಅವರದ್ದು ನೇರ ವ್ಯಕ್ತಿತ್ವ. ಅದು ರಾಜಕೀಯಕ್ಕೆ ಸೂಟ್ ಆಗಲ್ಲ ಎನ್ನುವುದು ದಿನಕರ್ ಹೇಳುವ ಕಾರಣ.

ಇದೇ ಮಾತನ್ನು ದರ್ಶನ್ ಹಿಂದೊಮ್ಮೆ ಹೇಳಿದ್ದರು. ನನಗೂ ರಾಜಕೀಯಕ್ಕೂ ಆಗಿ ಬರಲ್ಲ. ನನಗೆ ಕೋಪ ಜಾಸ್ತಿ. ಅದು ರಾಜಕೀಯಕ್ಕೆ ಸೂಟ್ ಆಗಲ್ಲ ಎಂದಿದ್ದರು.

ಹಾಗೆಂದು ದರ್ಶನ್ ರಾಜಕೀಯದಿಂದ ಸಂಪೂರ್ಣ ದೂರ ಇರುವವರೇನೂ ಅಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ದರ್ಶನ್, ಕಾಂಗ್ರೆಸ್​ನ ಎಚ್. ವಿಶ್ವನಾಥ್ ಪರ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಪ್ರಚಾರ ಮಾಡಿದ್ದರು. ಅದಕ್ಕೂ ಹಿಂದೆ ಅಂಬರೀಷ್ ಪರ ಪ್ರಚಾರ ಮಾಡಿದ್ದರು.

ಪಕ್ಷ ರಾಜಕೀಯಕ್ಕೂ, ದರ್ಶನ್​ಗೂ ದೂರ ದೂರ. ನನಗೆ ಗೊತ್ತಿರುವ ವ್ಯಕ್ತಿಗಳ ಬಗ್ಗೆ, ಪಕ್ಷವನ್ನ ಲೆಕ್ಕಕ್ಕೆ ತೆಗೆದುಕೊಳ್ಳದೆ ಸ್ನೇಹಕ್ಕಾಗಿ ಪ್ರಚಾರ ಮಾಡಿದ್ದೇನೆ ಅಷ್ಟೆ ಎಂದಿದ್ದರು ದರ್ಶನ್. ಆದರೆ, ಅದು ಆಗ. ಈಗ.. ದರ್ಶನ್ ಅವರೇ ರಾಜಕಾರಣ ಪ್ರವೇಶಿಸುತ್ತಾರೆ ಎಂಬ ಸುದ್ದಿಗೆ ಇನ್ನೂ ದರ್ಶನ್ ಕಡೆಯಿಂದ ಉತ್ತರ ಸಿಕ್ಕಿಲ್ಲ.

Related Articles :-

ದರ್ಶನ್ ರಾಜಕೀಯಕ್ಕೆ ತಾಯಿ ಮೀನಾ ತೂಗುದೀಪ್ ಹೇಳಿದ್ದೇನು..?

ರಾಜಕೀಯಕ್ಕೆ ಬರ್ತಾರಾ ಚಾಲೆಂಜಿಂಗ್ ಸ್ಟಾರ್ ದರ್ಶನ್..?

Geetha Movie Gallery

Damayanthi Teaser Launch Gallery