` ಸಾವಿನ ಸಮ್ಮುಖದಲ್ಲೂ ಎಲ್.ಎನ್. ಶಾಸ್ತ್ರಿ ಹಾಡು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ln shastry's last song
LN Shastri's Last Song became Viral

ಹುಟ್ಟುಹಬ್ಬದ ದಿನವೇ ಮೃತಪಟ್ಟ ಗಾಯಕ ಎಲ್.ಎನ್. ಶಾಸ್ತ್ರಿ ಅವರು ಹಾಡಿದ ಒಂದು ಹಾಡು ಈಗ ಅಭಿಮಾನಿಗಳಲ್ಲಿ ಕಣ್ಣೀರು ತರಿಸುತ್ತಿದೆ. ಕ್ವಾರುಣ್ಯ ಹಾಡಿನ ಮೂಲಕ, ಕನ್ನಡಿಗರ ಜಂಗಮದನಿಯಾದ ಎಲ್.ಎನ್. ಶಾಸ್ತ್ರಿ, ಈಗ ಇಲ್ಲ. ಕರುಳಿನ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಶಾಸ್ತ್ರಿ, ಕೊನೆಯುಸಿರೆಳೆದಿದ್ದಾರೆ. ಆದರೆ, ಹಾಗೆ ಸಾವಿನ ಸಮ್ಮುಖದಲ್ಲಿರುವಾಗಲೂ ಹಾಸಿಗೆಯಲ್ಲೇ ಹಾಡಿರುವ ಹಾಡು, ಅಭಿಮಾನಿಗಳ ಕಣ್ಣನ್ನು ಒದ್ದೆ ಮಾಡಿದೆ. 

ಮನಸಿನಾಳಕಿಳಿದು ನಿಂತ ಶಾಂತ ಮಧುರ ದನಿಗಳೇ.. ಹಾಡು ಕೇಳಿದವರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿದೆ. ಹಾಡಿನ ವಿಡಿಯೋ ನೋಡಿದವರು ಮತ್ತು ಕೇಳಿದವರು ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಗಾಯಕನಿಗೆ ಹೀಗಾಗಬಾರದಿತ್ತು ಎಂದು ಮರುಗುತ್ತಿದ್ದಾರೆ.

#

Ayushmanbhava Movie Gallery

Damayanthi Audio and Trailer Launch Gallery