ಸಾಹೇಬ, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯದ ಮೊದಲ ಸಿನಿಮಾ. ಸಿನಿಮಾ ರಿಲೀಸ್ ಆದ ದಿನ ಸಂಜೆ ವಿಶೇಷ ಪ್ರದರ್ಶನವಿತ್ತು. ರವಿಚಂದ್ರನ್ ಕೂಡಾ ಮಗನ ಸಿನಿಮಾ ನೋಡಿದ್ದು ಅಲ್ಲಿಯೇ. ಆದರೆ, ರವಿಚಂದ್ರನ್ ಮಗಳು ಗೀತಾಂಜಲಿಗೆ ಸಂಜೆಯವರೆಗೂ ಕಾಯಲು ಸಾಧ್ಯವಾಗಲಿಲ್ಲ. ಥಿಯೇಟರ್ಗೆ ಹೋಗಿ ನೋಡಿಕೊಂಡು ಬಂದರಂತೆ.
ಅಣ್ಣನ ಸಿನಿಮಾ ಇಷ್ಟವಾಗಿತ್ತು. ಆದರೆ, ಫಸ್ಟ್ ಆಫ್ ಲ್ಯಾಗ್ ಆಯ್ತು ಅನ್ನಿಸಿತು ಎಂದು ಭಯದಿಂದಲೇ ಹೇಳಿದರಂತೆ ಗೀತಾಂಜಲಿ. ಆಗ ರವಿಚಂದ್ರನ್, ಡೋಂಟ್ ವರಿ, ಹಬ್ಬದ ದಿನ, ಜನ ಕಡಿಮೆ ಇರುತ್ತಾರೆ. ಹಾಗಾಗಿ ನಿನಗೆ ಹಾಗನಿಸರಬೇಕು ಎಂದರಂತೆ.
ಅಷ್ಟೇ ಅಲ್ಲ, ತಮ್ಮ ಪ್ರೇಮಲೋಕ ಮತ್ತು ಪುಟ್ನಂಜ ಚಿತ್ರಗಳೂ ಕೂಡಾ ಆರಂಭದಲ್ಲಿ ಸೋಲುತ್ತವೆ ಎನ್ನಿಸಿದ್ದವು. ಜನರೇ ಬಂದಿರಲಿಲ್ಲ. ಕೆಲವು ವಾರ ಕಳೆದ ಮೇಲೆ ದಾಖಲೆಯನ್ನೇ ಬರೆದವು ಎಂದು ಸಮಾಧಾನ ಮಾಡಿದರಂತೆ.
ಆದರೆ, ಸಂಜೆ ಚಿತ್ರ ನೋಡಿದ ಮೇಲೆ ರವಿಚಂದ್ರನ್ ಕೂಡಾ ಮೆಚ್ಚಿಕೊಂಡರು. ಪ್ರೇಕ್ಷಕರೂ ಅಷ್ಟೆ, ರವಿಚಂದ್ರನ್ ಮಗಳುನ್ನು ಕಾಯಿಸಲೇ ಇಲ್ಲ. ಥಿಯೇಟರು ತುಂಬಿದವು. ಈಗ ಚಿತ್ರ ಹಿಟ್ ಆಗುವ ಹಾದಿಯಲ್ಲಿದೆ.