` ಹೊಸ ಚಿತ್ರದಲ್ಲಿ ಸುದೀಪ್ ಬೇಟೆಗಾರನಲ್ಲ.. ಆಟಗಾರ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep image
Sudeep To play as Sportsman in his next movie

ಕಿಚ್ಚ ಸುದೀಪ್ ನಟಿಸಿದ್ದ ಹೆಬ್ಬುಲಿ ಚಿತ್ರದಲ್ಲಿ ವಿಲನ್‍ಗಳನ್ನು ಬೇಟೆಯಾಡುವ ಬೇಟೆಗಾರನ ಪಾತ್ರದಲ್ಲಿ ಮಿಂಚಿದ್ದರು ಕಿಚ್ಚ ಸುದೀಪ್. ಆದರೆ, ಹೊಸ ಚಿತ್ರದಲ್ಲಿ ಸುದೀಪ್ ಬೇಟೆಗಾರನಲ್ಲ..ಆಟಗಾರ.

ಹೆಬ್ಬುಲಿ ನಂತರ ಕೃಷ್ಣ ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ಸುದೀಪ್ ಕ್ರೀಡಾಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಒಂದು ಮೂಲದ ಪ್ರಕಾರ ಸುದೀಪ್ ಅವರದ್ದು ಪೈಲ್ವಾನನ ಪಾತ್ರ. ಇನ್ನೊಂದು ಮೂಲದ ಪ್ರಕಾರ ಬಾಕ್ಸರ್ ಪಾತ್ರ. ಎರಡರ ನಡುವೆ ಹೋಲಿಕೆ ಇದೆಯಾದರೂ, ಹಳ್ಳಿ ಆಟದ ಕಥೆ ಎನ್ನಲಾಗುತ್ತಿದೆ. ಹೀಗಾಗಿ ಪೈಲ್ವಾನನಂತೆ ಕಾಣಿಸಿಕೊಂಡರೂ ಅಚ್ಚರಿಯಿಲ್ಲ. ಒಟ್ಟಿನಲ್ಲಿ ಅದು ಕ್ರೀಡಾಪಟುವಿನ ಕಥೆಯ ಚಿತ್ರ.

ಕನ್ನಡದಲ್ಲಿ ಕ್ರೀಡೆಯನ್ನೇ ಕಥೆಯನ್ನಾಗಿಸಿಕೊಂಡ ಚಿತ್ರಗಳು ಬಂದೇ ಇಲ್ಲ ಎನ್ನಬೇಕು. ಹೀಗಾಗಿ ಹೊಸ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕುತ್ತಿರುವ ಸುದೀಪ್, ಚಿತ್ರಕ್ಕಾಗಿ ಬಾಡಿಬಿಲ್ಡಿಂಗ್‍ನ್ನೂ ಮಾಡುತ್ತಿದ್ದಾರಂತೆ. ಜಿಮ್ ಎಂದರೇನೇ ಮಾರು ದೂರ ಓಡುತ್ತಿದ್ದ ಸುದೀಪ್ ಅವರನ್ನು ಕೃಷ್ಣ, ಈ ಚಿತ್ರದಿಂದ ಜಿಮ್‍ಗೆ ಕಟ್ಟಿಹಾಕಿದ್ದಾರೆ. 

ಚಿತ್ರದ ಫೋಟೋಶೂಟ್ ಮುಗಿದಿದ್ದು, ಸುದೀಪ್ ಹುಟ್ಟುಹಬ್ಬದ ದಿನ ಅಥವಾ ಒಂದು ದಿನ ಮೊದಲು ಚಿತ್ರದ ಫಸ್ಟ್‍ಲುಕ್ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ.

Related Articles :-

Sudeep Plays A Boxer in His Next Film

Krishna To Produce Sudeep's New Film

Shivarjun Movie Gallery

KFCC 75Years Celebrations and Logo Launch Gallery