` ಫೇಸ್​ಬುಕ್​ನಲ್ಲಿ ಮಿಲಿಯನೇರ್ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan gets i million followers
Darshan crossed One Million on Facebook 

ಅಭಿಮಾನಿಗಳ ಪಾಲಿನ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಮಾನಿಳಿಂದಲೇ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಚಿತ್ರನಟ ದರ್ಶನ್ ಅವರ ಫೇಸ್​ಬುಕ್ ಅಕೌಂಟ್​ನಲ್ಲಿ ಮಿಲಿಯನೇರ್ ಆಗಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿರುವ ಇತರೆ ಸ್ಟಾರ್​ಗಳಿಗೆ ಹೋಲಿಸಿದರೆ, ದರ್ಶನ್ ಟ್ವಿಟರ್ ಮತ್ತು ಫೇಸ್​ಬುಕ್​ನಲ್ಲಿ ಸದಾ ಆಕ್ಟಿವ್ ಆಗಿರೋದಿಲ್ಲ. ಕೇವಲ ತಮ್ಮ ಪೋಸ್ಟ್​ಗಳನ್ನು ಹಾಕುತ್ತಾರೆ. ಸಹ ಕಲಾವಿದರಿಗೆ ಶುಭ ಕೋರುವುದು, ಹುಟ್ಟುಹಬ್ಬದ ಹಾರೈಕೆ ಬಿಟ್ಟರೆ, ಉಳಿದಂತೆ ದರ್ಶನ್ ಅಲ್ಲಿ ಕೂಡಾ ಸೈಲೆಂಟ್.

ಹಾಗೆಂದು ಅಭಿಮಾನಿಗಳಿಗೆ ಪ್ರತಿಕ್ರಿಯಿಸುವುದೇ ಇಲ್ಲ ಎಂದೇನಲ್ಲ. ಆದರೆ, ಅಪರೂಪ. ಇಷ್ಟವಾದರೆ ಅಭಿಮಾನಿಗಳನ್ನು ವೈಯಕ್ತಿಕವಾಗಿ ಮಾತನಾಡಿಸುವ ಸಜ್ಜನಿಕೆ ದರ್ಶನ್ ಅವರಿಗಿದೆ. ಈಗ ಫೇಸ್​ಬುಕ್​ನಲ್ಲಿ ದರ್ಶನ್ ಪೇಜ್​ ಒಂದು ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್ ಇದ್ದಾರೆ.  

ಇತ್ತೀಚೆಗಷ್ಟೇ ಟ್ವಿಟರ್​ನಲ್ಲಿ ಕಿಚ್ಚ ಸುದೀಪ್ ಒಂದು ಮಿಲಿಯನ್ ಫಾಲೋವರ್ಸ್ ಗಡಿ ದಾಟಿ ದಾಖಲೆ ಬರೆದಿದ್ದರು. ಫೇಸ್​ಬುಕ್​ನಲ್ಲಿ ದರ್ಶನ್ ಆ ಸಾಧನೆ ಮಾಡಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery