` ಗೋಧಿ ಬಣ್ಣ ಡೈರೆಕ್ಟರ್ ಜೊತೆ ಮತ್ತೆ ಅನಂತ್‍ನಾಗ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
godhi banna
Anantha Nag In Godhi Banna

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಅಭಿನಯ, ಅನಂತ್ ನಾಗ್ ಅವರೊಳಗಿದ್ದ ಅದ್ಭುತ ಕಲಾವಿದನನ್ನು ಮತ್ತೊಮ್ಮೆ ಪರಿಚಯಿಸಿದ್ದ ಚಿತ್ರ. ಆ ಚಿತ್ರದ ನಿರ್ದೇಶಕ ಹೇಮಂತ್ ರಾವ್, ಈಗ ಕವಲು ದಾರಿ ಚಿತ್ರ ನಿರ್ದೇಶಿಸುತ್ತಿದ್ದಾರಷ್ಟೆ.. ಆ ಚಿತ್ರದಲ್ಲಿ ಅನಂತ್ ನಾಗ್ ಮತ್ತು ಹೇಮಂತ್ ರಾವ್ ಜೋಡಿ ಮತ್ತೊಮ್ಮೆ ಒಂದಾಗಿದೆ.

ಚಿತ್ರದಲ್ಲಿ ಅನಂತ್‍ನಾಗ್, ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಿರ್ದೇಶಕ ಹೇಮಂತ್ ಅವರಂತೂ ಚಿತ್ರದ ಬಗ್ಗೆ ಎಕ್ಸೈಟ್ ಆಗಿಬಿಟ್ಟಿದ್ದಾರೆ. ಚಿತ್ರದ ಹೀರೋ ರಿಷಿ. ಅದೇ ಆಪರೇಷನ್ ಆಲಮೇಲಮ್ಮ ಖ್ಯಾತಿಯ ರಿಷಿ.