` ಮನೋರಂಜನ್ `ಸಾಹೇಬ'ನಿಗೆ ಅಪ್ಪ ರವಿಚಂದ್ರನ್ ವಿಮರ್ಶೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ravichandran reviews saheba
Ravichandran Image

ಸಿನಿಮಾದ ಉದ್ದೇಶ ಮತ್ತು ಮನೋರಂಜನ್ ಪಾತ್ರ ತುಂಬಾ ಚೆನ್ನಾಗಿದೆ. ಮನೋರಂಜನ್ ಒಂದೊಳ್ಳೆಯ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾನೆ. ನನ್ನ ಮಗನ ಆಯ್ಕೆಯ ಬಗ್ಗೆ ನನಗೆ ಹೆಮ್ಮೆಯಿದೆ. ಇದು ಸಾಹೇಬ ಚಿತ್ರವನ್ನು ಸಕುಟುಂಬ ಸಮೇತರಾಗಿ ನೋಡಿದ ಮೇಲೆ ಕ್ರೇಜಿಸ್ಟಾರ್ ರವಿಚಂದ್ರನ್ ನೀಡಿದ ಪ್ರತಿಕ್ರಿಯೆ.

ಇದನ್ನು ನಾನು ಕ್ರೇಜಿಸ್ಟಾರ್ ಆಗಿ ಹೇಳ್ತಾ ಇಲ್ಲ. ಒಬ್ಬ ತಂದೆಯಾಗಿ ಹೇಳುತ್ತಿದ್ದೇನೆ ಎಂದಿದ್ದಾರೆ ರವಿಚಂದ್ರನ್. ಅಷ್ಟೇ ಅಲ್ಲ, ತಮ್ಮ ಈಶ್ವರಿ ಸಂಸ್ಥೆಯನ್ನು ಮಗ ಚೆನ್ನಾಗಿ ನೋಡಿಕೊಂಡು ಹೋಗುತ್ತಾನೆ ಎಂಬ ಭರವಸೆಯೂ ನನಗಿದೆ ಎಂದು ಹೇಳಿದ್ದಾರೆ ಕ್ರೇಜಿಸ್ಟಾರ್.

ನೆನಪಾಯಿತಂತೆ ಪ್ರೇಮಲೋಕ..ರಣಧೀರ..

----------------------------------------

ನನಗೆ ಮನೋರಂಜನ್ ಮತ್ತು ಶಾನ್ವಿ ಜೋಡಿ ನೋಡಿದಾಗ ಪ್ರೇಮಲೋಕದ ರವಿಚಂದ್ರನ್-ಜ್ಯೂಹಿ ಚಾವ್ಲಾ, ರಣಧೀರದ ರವಿಚಂದ್ರನ್-ಖುಷ್ ಬೂ ಜೋಡಿ ನೆನಪಾಯಿತು ಎಂದು ಹಿಂದಿನ ದಿನಕ್ಕೆ ಜಾರಿ ಹೋದ ರವಿಚಂದ್ರನ್‍ಗೆ, ಇಷ್ಟವಾಗಿದ್ದು ನಿರ್ದೇಶಕ ಭರತ್ ಕಥೆ ಹೇಳುವ ಶೈಲಿ. ಹರಿಕೃಷ್ಣ ಸಂಗೀತವೂ ರವಿಚಂದ್ರನ್‍ಗೆ ಖುಷಿ ಕೊಟ್ಟಿದೆ.

Geetha Movie Gallery

Damayanthi Teaser Launch Gallery