ಟ್ವಿಟರ್‍ನಲ್ಲಿ 1 ಮಿಲಿಯನ್ ಫಾಲೋವರ್ಸ್ ದಾಖಲೆ ಮುಟ್ಟಿದ ಸುದೀಪ್ ಸಾಧನೆ ಈಗ ಕೇವಲ ಸುದೀಪ್ ಸಂಭ್ರಮವಲ್ಲ. ಇಡೀ ಚಿತ್ರರಂಗದ ಸಂಭ್ರಮವೇ ಆಗಿಬಿಟ್ಟಿದೆ. ಪತ್ನಿ, ಮಗಳು, ಗೆಳೆಯರು..ಎಲ್ಲರೂ ಶುಭ ಕೋರಿದ್ದಾರೆ. ಅಭಿಮಾನಿಗಳ ಮಾತು ಬಿಡಿ, ಗಣೇಶನ ಹಬ್ಬಕ್ಕೆ ಮೊದಲೇ ದೀಪಾವಳಿ ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ.
ಧನ್ಯವಾದ ಸಹೋದರ ಎಂದು ಟ್ವೀಟ್ ಮಾಡಿರುವುದು ಹಿರಿಯ ನಟ ಜಗ್ಗೇಶ್. ನಟ ನೀನಾಸಂ ಸತೀಶ್, ವಿಲನ್ ಚಿತ್ರದ ನಿರ್ದೇಶಕ ಪ್ರೇಮ್, ಬಾಲಿವುಡ್ ಗೆಳೆಯ ಟ್ವಿಟರ್‍ಗೆ ಎಂಟ್ರಿ ಕೊಡಲು ಕಾರಣರಾದ ನಟ ರಿತೇಶ್ ದೇಶ್‍ಮುಖ್, ಕಬೀರ್ ದುಲ್ಹನ್ ಸಿಂಗ್, ನಿಮಾಪಕರಾದ ಮನೋಹರ್, ಕಾರ್ತಿಕ್ ಗೌಡ, ಚಿತ್ರಲೋಕ ಸಂಪಾದಕ ವೀರೇಶ್, ಕಲರ್ಸ್ ಕನ್ನಡ, ಝೀ ಕನ್ನಡ, ಆನಂದ್ ಆಡಿಯೋ.. ಹೀಗೆ ಸುದೀಪ್‍ಗೆ ಶುಭ ಕೋರಿದವರ ಸಂಖ್ಯೆ ತುಂಬಾ ದೊಡ್ಡದು.
ಸುದೀಪ್ ನಿಮ್ಮ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ ದಾಟಿದೆ.ಅಭಿನಂದನೆಗಳು. ನಿಮ್ಮ ಬಗ್ಗೆ ನನಗೆ ಮತ್ತು ಸಾನುಗೆ ಹೆಮ್ಮೆಯಿದೆ ಎಂದು ಟ್ವೀಟ್ ಮಾಡಿದ್ದಾರೆ , ಸುದೀಪ್ ಪತ್ನಿ ಪ್ರಿಯಾ ರಾಧಾಕೃಷ್ಣನ್.
ಟ್ವಿಟರ್ ಪರಿಚಯಿಸಿದ ಗೆಳೆಯ ರಿತೇಶ್ ದೇಶ್‍ಮುಖ್ ಟ್ವಿಟರ್ ಮೂಲಕವೇ ಅಪ್ಪುಗೆಯ ಸಂದೇಶ ಕಳಿಸಿದ್ದಾರೆ. ಒಟ್ಟಿನಲ್ಲಿ ಸುದೀಪ್ 1 ಮಿಲಿಯನ್ ಫಾಲೋವರ್ಸ್ ಸಂಪಾದಿಸಿದ್ದು ಕೇವಲ ಒಬ್ಬರ ಸಂಭ್ರಮವಾಗಿಲ್ಲ.
Related Articles :-
ಸ್ಯಾಂಡಲ್‍ವುಡ್‍ನ ಮೊದಲ ಮಿಲಿಯನೇರ್ ಕಿಚ್ಚ ಸುದೀಪ್