ಅಯೋಗ್ಯ - ಗ್ರಾಮ ಪಂಚಾಯಿತಿ ಸದಸ್ಯ. ಇದು ನೀನಾಸಂ ಅಭಿನಯಿಸುತ್ತಿರುವ ಚಿತ್ರ. ಈ ಚಿತ್ರಕ್ಕೆ ಈಗ ನಾಯಕಿಯಾಗಿ ರಚಿತಾ ರಾಮ್ ಆಯ್ಕೆಯಾಗಿದ್ದಾರೆ. ಸತೀಶ್ ನೀನಾಸಂ ಜೊತೆ ರಚಿತಾಗೆ ಇದು ಮೊದಲ ಚಿತ್ರ.
ಚಿತ್ರದಲ್ಲಿ ರಚಿತಾ ಪಕ್ಕಾ ಮಂಡ್ಯ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಗ್ರಾಜ್ಯುಯೇಟ್ ಹುಡುಗಿ ಬೇರೆ. ಯೋಗರಾಜ್ ಭಟ್‍ರ ಶಿಷ್ಯೆಸ್. ಮಹೇಶ್ ನಿರ್ದೇಶಿಸುತ್ತಿರುವ ಚಿತ್ರ, ಮಾಮೂಲಿ ಸ್ಟೈಲ್ ಚಿತ್ರಗಳಿಗಿಂತ ಡಿಫರೆಂಟ್ ಸಿನಿಮಾ ಎನ್ನಲಾಗ್ತಿದೆ.
ಇತ್ತೀಚೆಗೆ ರಚಿತಾ ರಾಮ್, ದುನಿಯಾ ವಿಜಯ್ ಜೊತೆಗಿನ ಕನಕ ಮತ್ತು ಜಾನಿ ಜಾನಿ ಯೆಸ್ ಪಪ್ಪಾ ಚಿತ್ರಕ್ಕೆ ಆಯ್ಕೆಯಾಗಿದ್ದರು. ನಂತರ ಭರ್ಜರಿ ಚಿತ್ರದ ಪ್ರಮೋಷನ್‍ಗೆ ತೊಂದರೆಯಾಗುತ್ತೆ ಎಂದು ಹೇಳಿ ಎರಡೂ ಚಿತ್ರಗಳಿಂದ ಹೊರಬಂದಿದ್ದರು. ಸದ್ಯಕ್ಕೆ ರಚಿತಾ ಉಪ್ಪಿರುಪ್ಪಿ ಮತ್ತು ಭರ್ಜರಿ ಚಿತ್ರಗಳನ್ನು ಹೊರತುಪಡಿಸಿ ಒಪ್ಪಿಕೊಂಡಿರುವ ಚಿತ್ರ ಇದೊಂದೇ.