ಕಿಚ್ಚ ಸುದೀಪ್ ಸ್ಯಾಂಡಲ್ವುಡ್ನಲ್ಲಿ ಹೊಸ ದಾಖಲೆಯನ್ನೇ ಬರೆದಿದ್ದಾರೆ. ಈ ದಾಖಲೆ ಬರೆದ ಮೊಟ್ಟಮೊದಲ ಕನ್ನಡ ನಟ ಕಿಚ್ಚ ಸುದೀಪ್. ಸುದೀಪ್ ಈ ವಿಶೇಷ ದಾಖಲೆ ಬರೆದಿರುವುದು ಟ್ವಿಟರ್ನಲ್ಲಿ. ಟ್ವಿಟರ್ನಲ್ಲಿ ಸುದೀಪ್ ಫಾಲೋವರ್ಸ್ ಸಂಖ್ಯೆ 10 ಲಕ್ಷದ ಗಡಿ ದಾಟಿದೆ (21st August 2017 at IST 11.46 AM) . ಟ್ವಿಟರ್ನಲ್ಲಿ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುವ ನಟ ಸುದೀಪ್. ಸಂಪರ್ಕದಲ್ಲಿರುವುದಷ್ಟೇ ಅಲ್ಲ, ಅಭಿಮಾನಿಗಳ ಜೊತೆ ನಿರಂತರ ಮಾತುಕತೆಯಲ್ಲೂ ತೊಡಗುತ್ತಾರೆ. ಹೊಸಬರ ಚಿತ್ರಗಳಿಗೆ ಮೆಚ್ಚುಗೆಯ ಮಾತನಾಡುತ್ತಾರೆ. ಹೀಗಾಗಿಯೇ ಅಭಿಮಾನಿಗಳೂ ಸುದೀಪ್ರನ್ನು ಇಷ್ಟಪಡ್ತಾರೆ.
ಸುದೀಪ್ ಬಿಟ್ಟರೆ, ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕನ್ನಡಿಗರೆಂದರೆ, ಕಿರಣ್ ಮಜುಂದಾರ್ ಶಾ, ನಂದನ್ ನಿಲೇಕಣಿ, ಮೋಹನ್ದಾಸ್ ಪೈ.. ಮೊದಲಾದ ಉದ್ಯಮಿಗಳಷ್ಟೆ.
ಟ್ವಿಟರ್ನಲ್ಲಿ ಸುದೀಪ್ ಬಿಟ್ಟರೆ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಚಿತ್ರರಂಗದ ಸ್ಟಾರ್ಗಳ ಪೈಕಿ ರಮ್ಯ ಎರಡನೇ ಸ್ಥಾನದಲ್ಲಿದ್ದಾರೆ.
ಸುದೀಪ್ - 10 ಲಕ್ಷ
ರಮ್ಯಾ - 5.15 ಲಕ್ಷ
ಉಪೇಂದ್ರ - 3.2 ಲಕ್ಷ
ದರ್ಶನ್ - 2.6 ಲಕ್ಷ
ಸಂಜನಾ ಗರ್ಲಾನಿ - 1.6 ಲಕ್ಷ
ಜಗ್ಗೇಶ್ - 1.5 ಲಕ್ಷ
ಪ್ರಿಯಾಂಕಾ ಉಪೇಂದ್ರ - 1.4 ಲಕ್ಷ
ರಮೇಶ್ ಅರವಿಂದ್ - 1.2 ಲಕ್ಷ
ರಾಗಿಣಿ ದ್ವಿವೇದಿ - 93 ಸಾವಿರ
ಯಶ್ - 60 ಸಾವಿರ
ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್ ಸೇರಿದಂತೆ ಹಲವು ಸ್ಟಾರ್ಗಳು ಟ್ವಿಟರ್ನಲ್ಲಿ ಆಕ್ಟಿವ್ ಆಗಿಲ್ಲ. ಕರ್ನಾಟಕದಿಂದ ಹೋಗಿ, ಇಂಡಿಯನ್ ಸ್ಟಾರ್ಗಳಾಗಿ ಬೆಳೆದಿರುವ ಪ್ರಕಾಶ್ ರೈ(14 ಲಕ್ಷ) ಮತ್ತು ಪ್ರಿಯಾಮಣಿ(11 ಲಕ್ಷ)ಗೆ ಫಾಲೋವರ್ಸ್ ಇದ್ದಾರೆ.
ಇವರೆಲ್ಲರ ಸಾಧನೆಗಿಂಗ ಸುದೀಪ್ ಸಾಧನೆ ವಿಶೇಷ ಎನಿಸುವುದಕ್ಕೆ ಕಾರಣವೂ ಇದೆ. ಸುದೀಪ್ ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿರಬಹುದು. ಆದರೆ, ಅವರು ಹೆಚ್ಚು ಗಮನ ಹರಿಸಿರುವುದು ಕನ್ನಡ ಚಿತ್ರರಂಗದಲ್ಲಿ. ಹೀಗಾಗಿಯೇ 10 ಲಕ್ಷ ಫಾಲೋವರ್ಸ್ ಗಡಿ ದಾಟಿದ ಸುದೀಪ್ ಸಾಧನೆ ವಿಶೇಷ ಎನ್ನಿಸೋದು.
Related Articles :-