` ಪ್ರಜಾಕೀಯ ಅಲ್ಲ, ಉತ್ತಮ ಪ್ರಜಾ ಪಾರ್ಟಿ - ಇದು ಉಪ್ಪಿ ಪಕ್ಷ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
upendra's uttama praja party
Upendra Image

ರಿಯಲ್ ಸ್ಟಾರ್ ಉಪೇಂದ್ರ ಇತ್ತೀಚೆಗೆ ಪ್ರಜಾಕೀಯದ ಬಗ್ಗೆ ಪ್ರಸ್ತಾಪಿಸಿ ರಾಜ್ಯಾದ್ಯಂತ ಸುದ್ದಿಯಲ್ಲಿದ್ದರು. ಆದರೆ, ಅವರು ಸ್ಥಾಪಿಸಲು ಮುಂದಾಗಿರುವ ಹೊಸ ರಾಜಕೀಯ ಪಕ್ಷದ ಹೆಸರು ಪ್ರಜಾಕೀಯ ಅಲ್ಲ, ಉತ್ತಮ ಪ್ರಜಾ ಪಾರ್ಟಿ ಎಂಬ ಹೆಸರಿನಲ್ಲಿ ರಾಜಕೀಯ ಪಕ್ಷ ರಿಜಿಸ್ಟರ್ ಮಾಡಿಸುತ್ತಿದ್ದಾರೆ ಉಪೇಂದ್ರ. ಈ ಕುರಿತಂತೆ ಈಗಾಗಲೇ ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರಂತೆ.

ಉಪೇಂದ್ರ ಅವರ ಹೊಸ ಪಕ್ಷಕ್ಕೆ ಸೇರಬೇಕೆಂದರೆ, ಸದಸ್ಯತ್ವಕ್ಕಾಗಿ ನೀವೇ ಅರ್ಜಿ ಹಾಕಬೇಕು. ಅರ್ಜಿಯ ಮಾದರಿ ಸಿದ್ಧವಾಗಿದೆ. ಅರ್ಜಿ ಹಾಕುವವರು ತಮ್ಮ ವೈಯಕ್ತಿಕ ವಿವರ, ಎರಡು ಫೋಟೋ ಮತ್ತು ಆಧಾರ್ ಮತ್ತಿತರ ಗುರುತಿನ ಚೀಟಿಗಳ ಪ್ರತಿಗಳನ್ನೂ ಅರ್ಜಿಯ ಜೊತೆ ಲಗತ್ತಿಸಬೇಕು. 

ಸದಸ್ಯತ್ವ ನೋಂದಣಿ ಅಭಿಯಾನದ ಜೊತೆ ಜೊತೆಗೇ ಪ್ರಚಾರಕ್ಕೂ ಕೈ ಹಾಕಲಿದ್ದಾರಂತೆ ಉಪೇಂದ್ರ. ಇವೆಲ್ಲವೂ ಸದ್ಯಕ್ಕೆ ನಡೆಯುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ.