` ಅಪ್ಪನ ಹಾಡಿನ ಮೂಲಕ ಕ್ರೇಝ್ ಸೃಷ್ಟಿಸಿದ ಕ್ರೇಜೀಸ್ಟಾರ್ ಪುತ್ರ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
yaare neenu roja hoove remixed song
Ravichandran, Manoranjan

ಯಾರೆ ನೀನು.. ರೋಜಾ ಹೂವೇ.. ಯಾರೆ ನೀನು.. ಮಲ್ಲಿಗೆ ಹೂವೆ.. ಅದು ರವಿಚಂದ್ರನ್ ಅಭಿನಯದ ನಾನು ನನ್ನ ಹೆಂಡ್ತಿ ಚಿತ್ರದ ಸೂಪರ್ ಹಿಟ್ ಹಾಡು. ಆ ಹಾಡಿನ ನಂತರ, ಆ ಕಾಲದ ಹುಡುಗಿಯರ ಹೃದಯದಲ್ಲಿ ರವಿಚಂದ್ರನ್ ಪ್ರೇಮಲೋಕ ಕಟ್ಟಿದ್ದು ಸುಳ್ಳಲ್ಲ. ಈಗ ಅವರ ಮಗನ ಸರದಿ. ರವಿಚಂದ್ರನ್ ಪುತ್ರ ಮನೋರಂಜನ್ ನಟಿಸಿರುವ ಮೊದಲ ಚಿತ್ರ ಸಾಹೇಬದಲ್ಲಿ ಯಾರೆ ನೀನು ರೋಜಾ ಹೂವೆ ಹಾಡನ್ನು ಬಳಸಿಕೊಳ್ಳಲಾಗಿದೆ.

ಆ ಹಾಡನ್ನು ರೀಮಿಕ್ಸ್ ಮಾಡಿ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಓಲ್ಡ್ ಚಿತ್ರದಲ್ಲಿ ರೋಜಾ ಹೂವುಗಳ ಜೊತೆ ರವಿಚಂದ್ರನ್ ಕುಣಿದಿದ್ದರಲ್ಲ.. ಅದಕ್ಕಿಂತ ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ ರವಿ ಪುತ್ರ ಮನೋರಂಜನ್. ಜೊತೆಯಲ್ಲಿ ರೋಜಾ ಹೂವುಗಳಿವೆ. ಹಾಡು ಕ್ರೇಜ್ ಸೃಷ್ಟಿಸಿಬಿಟ್ಟಿದೆ.

 

Padarasa Movie Gallery

Kumari 21 Movie Gallery