ತಾರಕ್, ದರ್ಶನ್ ಅಭಿನಯದ 49ನೇ ಚಿತ್ರ. ಚಿತ್ರದ ಹೀರೋ ಅವರೇ. ಹೀಗಿರುವಾಗ ಚಿತ್ರದ ಹೀರೋ ನಾನಲ್ಲ ಎಂದು ದರ್ಶನ್ ಅವರೇ ಹೇಳಿದರೆ ಏನಪ್ಪಾ ಕಥೆ ಅಂತಾ ತಲೆಗೆ ಹುಳ ಬಿಟ್ಕೋಬೇಡಿ. ದರ್ಶನ್ ಪ್ರಕಾರ ಚಿತ್ರದ ಹೀರೋ ಡೈನಮಿಕ್ ಸ್ಟಾರ್ ದೇವರಾಜ್.
ತಾರಕ್ ಚಿತ್ರದ ಆಡಿಯೋ ಬಿಡುಗಡೆ ವೇಳೆ, ದೇವರಾಜ್ ಅವರ ಪ್ರೀತಿ ಮತ್ತು ಪಾತ್ರವನ್ನು ಪ್ರೀತಿಯಿಂದ ಮೆಚ್ಚಿಕೊಂಡ ದರ್ಶನ್, ದೇವರಾಜ್ ಅವರನ್ನು ಹೊಗಳಿದರು. ದೇವರಾಜ್ ತಮಗಿಂತ ಎತ್ತರದ ಸ್ಥಾನದಲ್ಲಿದ್ಧಾರೆ ಎಂದು ಹೇಳಿ ಪ್ರೀತಿಯಿಂದ ಧನ್ಯವಾದ ಅರ್ಪಿಸಿದರು ದರ್ಶನ್.
ಚಿತ್ರದಲ್ಲಿ ದೇವರಾಜ್ ದರ್ಶನ್ ತಂದೆಯ ಪಾತ್ರ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಫುಟ್ಬಾಲ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಮಗೆ ಈ ಚಿತ್ರದಲ್ಲಿ ಹಳೆಯ ದರ್ಶನ್ ಸಿಕ್ಕೋದಿಲ್ಲ. ನಿರ್ದೇಶಕ ಮಿಲನ ಪ್ರಕಾಶ್ ನಿರ್ದೇಶಿಸಿರುವ ನಟ ದರ್ಶನ್ ಅವರನ್ನಷ್ಟೇ ನೋಡಬಹುದು ಎನ್ನುವ ಮೂಲಕ ಚಿತ್ರದ ಬಗೆಗಿನ ಕುತೂಹಲವನ್ನೂ ಹೆಚ್ಚಿಸಿದ್ರು ದರ್ಶನ್.