` ಮತ್ತೆ ಮದುವೆಯಾದರು ಲವ್ಲಿ ಸ್ಟಾರ್ ಪ್ರೇಮ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
prem married again
Stylish Star Prem Married Again

ಲವ್ಲಿ ಸ್ಟಾರ್ ಪ್ರೇಮ್.. ಅದೇ ನೆನಪಿರಲಿ ಪ್ರೇಮ್.. ಮತ್ತೊಮ್ಮೆ ಮದುವೆಯಾಗಿದ್ದಾರೆ. ಮಕ್ಕಳ ಎದುರಿಗೇ ತಾಳಿ ಶಾಸ್ತ್ರೋಕ್ತವಾಗಿ ತಾಳಿ ಕಟ್ಟಿದ್ದಾರೆ. ಸಪ್ತಪದಿ ತುಳಿದಿದ್ದಾರೆ.  ಪ್ರೇಮ್ ಮದುವೆಯಾಗಿರುವ ಹುಡುಗಿ ಜ್ಯೋತಿ. ಗಾಬರಿಯಾಗಬೇಡಿ. ತಮ್ಮ ಪತ್ನಿಯನ್ನೇ ಎರಡನೇ ಬಾರಿ ಮದುವೆಯಾಗಿದ್ದಾರೆ.

ಇದೆಲ್ಲ ನಡೆದಿರೋದು ಡಾನ್ಸ್ ಡಾನ್ಯ್ಸ್ ಜ್ಯೂನಿಯರ್ಸ್ ಕಾರ್ಯಕ್ರಮದಲ್ಲಿ. ಆ ಕಾರ್ಯಕ್ರಮದಲ್ಲಿ ಪ್ರೇಮ್ ಜಡ್ಜ್ ಆಗಿದ್ದಾರೆ. ಫ್ಯಾಮಿಲಿ ರೌಂಡ್ಸ್ ಕಾರ್ಯಕ್ರಮದಲ್ಲಿ ಎಲ್ಲರೂ ತಮ್ಮ ಕುಟುಂಬದವರೊಂದಿಗೆ ಬರಬೇಕಿತ್ತು. ಹಾಗೆ ಬಂದವರಿಗೆ ಇದ್ದ ಟಾಸ್ಕ್​ ಪ್ರಕಾರ, ಪ್ರೇಮ್ ತಮ್ಮ ಇಬ್ಬರು ಮಕ್ಕಳ ಎದುರು ಪತ್ನಿ ಜ್ಯೋತಿಗೆ ಮತ್ತೊಮ್ಮೆ ತಾಳಿ ಕಟ್ಟಿ, ಸಪ್ತಪದಿ ತುಳಿದಿದ್ದಾರೆ. ಆ ಮದುವೆಗೆ ಅವರಿಬ್ಬರ ಮಕ್ಕಳು ಸಾಕ್ಷಿಯಾದದ್ದು ವಿಶೇಷ.