ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರ, ಇನ್ನೊಂದು ದಾಖಲೆ ಸೃಷ್ಟಿಸಿದೆ. ಚಿತ್ರದ 3ಡಿ ವಿಡಿಯೋ ಗೇಮ್ ಬಂದಿದೆ. ಮಾಸ್ ಲೀಡರ್ ಚಿತ್ರದ ಕಥೆಗೆ ಹೊಂದುವಂತೆಯೇ, ವಿಡಿಯೋ ಗೇಮ್ ರೂಪಿಸಲಾಗಿದೆ.
ಇನ್‍ಫ್ಯಾಂಟ್ ಸ್ಟುಡಿಯೋಸ್ ಡೆವಿಡ್ ಎಂಬುವರು ಈ ವಿಡಿಯೋ ರೂಪಿಸಿದ್ದಾರೆ. ಆಂಡ್ರಾಯ್ಡ್ ಮೊಬೈಲ್‍ನಲ್ಲಿ ಲೀಡರ್ ಎಸ್‍ಆರ್‍ಕೆ ಎಂದು ಇಂಗ್ಲಿಷ್‍ನಲ್ಲಿ ಟೈಪ್ ಮಾಡಿದರೆ, ವಿಡಿಯೋ ಗೇಮ್ ಓಪನ್ ಆಗುತ್ತೆ. ಬೇಕೆಂದರೆ, ಇಷ್ಟವಾದರೆ ಇಷ್ಟ ಬಂದಷ್ಟು ಹೊತ್ತು ಭಯೋತ್ಪಾದಕರನ್ನು ಹೊಡೆದು ಹಾಕ್ತಾ ಇರಿ.