` ಭಲೇ ಅದೃಷ್ಟವೋ ಅದೃಷ್ಟ - ಪ್ರಭುದೇವಾಗೆ ಹೀರೋಯಿನ್ ಆದ ಸಂಯುಕ್ತಾ ಹೆಗಡೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
samyuktha hegde's dream comes true
Samyuktha Hedge, Prabhudeva Image

ಕಿರಿಕ್ ಪಾರ್ಟಿ ಚಿತ್ರದಲ್ಲಿನ ನೀನಿರೆ.. ಸನಿಹ ನೀನಿರೆ ಹಾಡು ಮತ್ತು ಡ್ಯಾನ್ಸ್. ಅದರಲ್ಲೂ ಎರಡೂ ಕಾಲುಗಳನ್ನು ಸ್ಕೇಲ್‍ನಂತೆ ಮಾಡುವ ಆ ಶೈಲಿ. ಆ ಮೂಲಕ ತಾನೊಬ್ಬ ಪಕ್ಕಾ ಡ್ಯಾನ್ಸರ್ ಎನ್ನುವುದನ್ನು ಸಾಬೀತು ಮಾಡಿದ ಸಂಯುಕ್ತಾ ಹೆಗಡೆಗೆ ಈಗ ಅದೃಷ್ಟ ಖುಲಾಯಿಸಿದೆ. ಸಂಯುಕ್ತಾ ಹೆಗಡೆ ಪ್ರಭುದೇವಾ ಅವರಿಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ.

ಹಿಂದಿ, ತಮಿಳು, ತೆಲುಗಿನಲ್ಲಿ ಬರಲಿರುವ ಆ ಚಿತ್ರದಲ್ಲಿ ಸಂಯುಕ್ತಾ ಹೆಗಡೆ 25 ವರ್ಷದ ಡ್ಯಾನ್ಸರ್ ಪಾತ್ರ ಮಾಡುತ್ತಿದ್ದಾರೆ. ಕಾಮಿಡಿ ಲವ್ ಸ್ಟೋರಿಯಾಗಿರುವ ಚಿತ್ರದಲ್ಲಿ ಸಂಯುಕ್ತಾ ಹೆಗಡೆಗೆ ಪ್ರಭುದೇವಾ ಜೊತೆ ಡ್ಯಾನ್ಸ್ ಮಾಡುವ ಅವಕಾಶವೂ ಇದೆಯಂತೆ.

ಸ್ವತಃ ಡ್ಯಾನ್ಸರ್ ಆಗಿರುವ ಸಂಯುಕ್ತಾಗೆ ಸಹಜವಾಗಿಯೇ ಪ್ರಭುದೇವಾ ಜೊತೆ ಡ್ಯಾನ್ಸ್ ಮಾಡಬಬೇಕು ಎನ್ನುವ ಹುಚ್ಚಿತ್ತು. ಚಿಕ್ಕಂದಿನಿಂದ ಬೆಳೆಸಿಕೊಂಡಿದ್ದ ಆ ಆಸೆ ಈಗ ಈಡೇರುತ್ತಿದೆ. ಡೇಟ್ ಸಮಸ್ಯೆಯಿಂದಾಗಿ ಹೆಚ್ಚೂ ಕಡಿಮೆ ಕೈತಪ್ಪಿತು ಎಂದುಕೊಂಡಿದ್ದ ಚಿತ್ರದಲ್ಲಿ ಮತ್ತೆ ಅವಕಾಶ ಸಿಕ್ಕಿದೆ. ಒಬ್ಬ ಡ್ಯಾನ್ಸರ್ ಆಗಿರುವ ನನಗೆ ಪ್ರಭುದೇವಾ ಜೊತೆ ಡ್ಯಾನ್ಸ್ ಮಾಡುವುದು ನಿಜಕ್ಕೂ ಥ್ರಿಲ್ ನೀಡಲಿದೆ ಎಂದಿದ್ದಾರೆ ಸಂಯುಕ್ತಾ.

Chemistry Of Kariyappa Movie Gallery

BellBottom Movie Gallery