` ಬ್ರಹ್ಮಾವರ್ ಅವರಿಗೆ ಆಸರೆ ನೀಡೋಣ - ಸುದೀಪ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bramhavar image
Bramhavar, Sudeep Image

ಸಂಕಷ್ಟದಲ್ಲಿರುವ ನಟ ಬ್ರಹ್ಮಾವರ್ ಅವರಿಗೆ ನೆರವು ನೀಡಲು ಮುಂದಾಗಿರುವ ನಟ ಸುದೀಪ್, ಅವರಿಗೊಂದು ನೆಲೆ ಒದಗಿಸಬೇಕು. ಒದಗಿಸೋಣ. ಆಸರೆಯಾಗೋಣ. ಅದಕ್ಕೆ ಏನೇನು ಬೇಕೋ, ಅದೆಲ್ಲ ವ್ಯವಸ್ಥೆ ಮಾಡುತ್ತೇನೆ ಎಂದಿದ್ದಾರೆ.

ಬ್ರಹ್ಮಾವರ್ ಅವರಿಗೆ ಹಣ ನೀಡುತ್ತೀರಾ ಎಂಬ ಪ್ರಶ್ನೆಗೂ ಅಷ್ಟೆ, ಹಣ ಕೊಡುವುದು ಸುಲಭ. ಆದರೆ, ನಾವು ಕೊಡುವ ಹಣ ಅವರನ್ನು ಇನ್ನಷ್ಟು ಕಷ್ಟಕ್ಕೆ ಸಿಲುಕಿಸಬಾರದು. ಒಂದು ಮನೆ ಮಾಡಿಕೊಡೋಣ. ಅಕ್ಕಪಕ್ಕದಲ್ಲಿ ಗೆಳೆಯರಿರುವಂತಹ ವ್ಯವಸ್ಥೆ ಮಾಡೋಣ. ನೆಮ್ಮದಿಯ ಜೀವನಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸೋಣ ಎಂದಿದ್ದಾರೆ.

ನಟ ಸುದೀಪ್ ಮಾತಿನಲ್ಲೂ ಅರ್ಥವಿದೆ. ಒಂದಿಷ್ಟು ನೆರವು ಎಂದು ಹೇಳಿ ಹಣ ಕೊಡುವುದು ಸುಲಭ. ಆದರೆ, ಈ ಇಳಿವಯಸ್ಸಿನಲ್ಲಿ ಹಣವನ್ನು ನಿಭಾಯಿಸಲಾದರೂ ಶಕ್ತಿ ಬೇಕಲ್ಲವೇ..? ಆ ಕಾರಣಕ್ಕೇ ಸುದೀಪ್, ಬ್ರಹ್ಮಾವರ್ ಅವರಿಗೆ ಒಂದು ನೆಲೆ ಕಲ್ಪಿಸುವ ಯೋಚನೆ ಮಾಡಿರುವ ಸುದೀಪ್‍ಗೆ ಥ್ಯಾಂಕ್ಸ್ ಹೇಳಲೇಬೇಕು.

Related Articles :-

Rajkumar Family Rushes To Help Brahmavar

ಬೀದಿಗೆ ಬಿದ್ದ ಬ್ರಹ್ಮಾವರ್ - ಕಣ್ಣೊರೆಸಲು ದೊಡ್ಮನೆ ಎಂಟ್ರಿ

ಬ್ರಹ್ಮಾವರ್ ನೆರವಿಗೆ ಕೈ ಚಾಚಿದ ಸ್ವಾತಿಮುತ್ತು ಸುದೀಪ್

Sudeep Rushes to Help Brahmavar - Exclusive

ಬೀದಿಗೆ ಬಿದ್ದರು ಸದಾಶಿವ ಬ್ರಹ್ಮಾವರ್ - ಹೆತ್ತಮಕ್ಕಳೇ ಹೊರಗೆ ದಬ್ಬಿದರಾ..?

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery