ನಟ ಸದಾಶಿವ ಬ್ರಹ್ಮಾವರ್ ಅವರ ಬದುಕು ಮೂರಾಬಟ್ಟೆಯಾಗಿರುವುದನ್ನು ತಿಳಿದ ಡಾ. ರಾಜ್ ಕುಮಾರ್ ಕುಟುಂಬ ಕನಲಿ ಹೋಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಶಿವರಾಜ್ ಕುಮಾರ್ ಅಭಿಮಾನಿ ಹಾಗೂ ಟಗರು ಚಿತ್ರದ ನಿರ್ಮಾಪಕ ಶ್ರೀಕಾಂತ್, ಚಿತ್ರಲೋಕ ಸಂಪಾದಕ ವೀರೇಶ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡರು. ಶಿವರಾಜ್ ಕುಮಾರ್ ಸೂಚನೆ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾಗಿರುವ ಶ್ರೀಕಾಂತ್, ಮೊದಲು ಬ್ರಹ್ಮಾವರ್ ಎಲ್ಲಿದ್ದಾರೆ ಎನ್ನುವುದನ್ನು ಹುಡುಕುತ್ತೇವೆ. ನಂತರ ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದು ತಿಳಿಸಿದ್ದಾರೆ.
ಮಾಧ್ಯಮಗಳ ಮೂಲಕ ಸುದ್ದಿ ತಿಳಿಯುತ್ತಿದ್ದಂತೆ ಶಿವರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಬ್ರಹ್ಮಾವರ್, ರಾಜ್ ಬ್ಯಾನರ್ನ ಬಹುತೇಕ ಚಿತ್ರಗಳಲ್ಲಿ ಖಾಯಂ ಕಲಾವಿದರಾಗಿದ್ದರು. ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ ಕುಮಾರ್ ಚಿತ್ರಗಳಲ್ಲಿ ನಟಿಸಿದ್ದರು.
Related Articles :-
ಬ್ರಹ್ಮಾವರ್ ನೆರವಿಗೆ ಕೈ ಚಾಚಿದ ಸ್ವಾತಿಮುತ್ತು ಸುದೀಪ್
Sudeep Rushes to Help Brahmavar - Exclusive
ಬೀದಿಗೆ ಬಿದ್ದರು ಸದಾಶಿವ ಬ್ರಹ್ಮಾವರ್ - ಹೆತ್ತಮಕ್ಕಳೇ ಹೊರಗೆ ದಬ್ಬಿದರಾ..?