` ರಾಜ್ಯದಲ್ಲೇ ಅತಿ ಹೆಚ್ಚು ಕುತೂಹಲ ಮೂಡಿಸಿರುವ ಮರ್ಡರ್ ಕೇಸ್ - ಕಾಫಿತೋಟ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
coffee thota
Coffee Thota Movie Image

ಕಾಫಿತೋಟ ಚಿತ್ರದ ಟ್ರೇಲರ್​ ಹಾಗಿದೆ. ಅಲ್ಲೊಂದು ಕೊಲೆಯ ಕಥೆಯಿದೆ. ಕೊಲೆ ಮಾಡಿರೋದು ಯಾರು..? ಆಕೆನಾ..? ಅವನಾ..? ನಿಜಕ್ಕೂ ಆಕೆ ಕೊಲೆಗಾತಿಯಾ..? ಅಥವಾ ಆಕೆಯನ್ನು ಸಿಗಿಸಲು ಸಂಚು ಮಾಡಲಾಗುತ್ತಿದೆಯಾ..? 200 ಕೋಟಿ ರೂಪಾಯಿ ಆಸ್ತಿಯ ಕಥೆ ಏನು..? ಅವನು ಅವಳನ್ನು ಬಿಟ್ಟು ಬೇರೆ ಮದುವೆಯಾಗಿದ್ದು ಯಾಕೆ..? ಆ ಕೊಲೆಗೆ ಆ ಮಗುವೇ ಸಾಕ್ಷಿನಾ..? 

ಸೀತಾರಾಮ್ ಸರ್.. ಏನ್ಸಾರ್ ಇದು. ಒಂದೇ ಒಂದು ಟ್ರೇಲರ್​ನಲ್ಲಿ ಇಷ್ಟೆಲ್ಲ ಹುಳ ಬಿಡೋದಾ..? ಇದು ಕಾಫಿತೋಟ ನೋಡಿದವರು ಸೀತಾರಾಮ್ ಅವರಿಗೆ ಕೇಳ್ತಿರೋ ಪ್ರಶ್ನೆ. ಅದು ನಿರ್ದೇಶಕನಿಗೆ ಖುಷಿ ಕೊಡಬೇಕಾದ ವಿಷಯ. ಚಿತ್ರದ ಟ್ರೇಲರ್​ ನೋಡಿದವರು ಇದರ ಜೊತೆ ಇನ್ನೂ 10 ಪ್ರಶ್ನೆಗಳನ್ನು ಹಾಕಿಕೊಂಡರೆ ಆಶ್ಚರ್ಯ ಪಡಬೇಡಿ. ಕಾಫಿತೋಟದ ಟ್ರೇಲರ್​ನಲ್ಲಿ ಅಷ್ಟೆಲ್ಲ ಸಸ್ಪೆನ್ಸ್ ಇಟ್ಟಿದ್ದಾರೆ ಟಿ.ಎನ್. ಸೀತಾರಾಮ್.

ಅಷ್ಟರಮಟ್ಟಿಗೆ ಸೀತಾರಾಮ್, ಸಿನಿಮಾ ಬಿಡುಗಡೆಗೂ ಮುನ್ನವೇ ಗೆದ್ದುಬಿಟ್ಟಿದ್ದಾರೆ. ಟ್ರೇಲರ್ ನೋಡಿ ತಲೆ ಉತ್ತರಗಳಿಗಾಗಿ ತಲೆ ಕೆಡಿಸಿಕೊಂಡವರು ಆಗಸ್ಟ್ 18ರಂದು ಥಿಯೇಟರ್​ಗೆ ಹೋಗೋದು ಖಚಿತ. 

ಕಾಫಿತೋಟದಲ್ಲೊಂದು ಕಿತಾಪತಿ : ಸಿನಿಮಾ ರಿಲೀಸ್ ಆಗೋಕೂ ಮುಂಚೆ ಉತ್ತರ ಬೇಕಾ..? ಫೇಸ್​ಬುಕ್​ನಲ್ಲಿ ಸೀತಾರಾಮ್ ಸಿಗ್ತಾರೆ. ಇನ್​ಬಾಕ್ಸ್ ಮಾಡಿ ನೋಡಿ. ಉತ್ತರ ಕೊಟ್ಟರೂ ಕೊಡಬಹುದು.

Related Articles :-

ಸೀತಾರಾಮ್ `ಕಾಪಿತೋಟ'ದಲ್ಲಿ ಏನ್ ಬೇಕಾದ್ರೂ ಆಗಬಹುದು..!

ಹೀರೋಯಿನ್‍ಗೆ ಆಕ್ಸಿಡೆಂಟ್ ಆದರೆ ಸಿನಿಮಾ ಹಿಟ್ ಆಗುತ್ತಾ..?

Coffee Thota Trailer Launched

Coffee Thota To Release On August 18th

Puneeth Rajakumar Releases The Songs Of Coffee Thota

T N Seetharam's Coffee Thota To Be Launched On 9th Dec

Kaafi Thota Releasing On August 18th

 

#

Edakallu GuddadaMele Movie Gallery

Rightbanner02_backasura_inside

Rajaratha Movie Gallery