` ಅಭಿಮಾನಿಯ ಅತಿರೇಕಕ್ಕೆ ಕಿಚ್ಚನ ಬುದ್ದಿವಾದ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep image
Sudeep's Advice to fan

ಅಭಿಮಾನಿಗಳು ಅಭಿಮಾನದ ಹುಚ್ಚು ಹೊಳೆಯಲ್ಲಿ ಮುಳುಗೇಳುವುದು ಹೊಸದೇನೂ ಅಲ್ಲ. ಕಿಚ್ಚ ಸುದೀಪ್ ಅಭಿಮಾನಿಗಳೂ ಇದರಕ್ಕೆ ಹೊರತಲ್ಲ. ಅಂತಹ ಒಬ್ಬ ಹುಚ್ಚು ಅಭಿಮಾನಿಯ ಅತಿರೇಕಕ್ಕೆ ಕಿಚ್ಚ ಸುದೀಪ್ ಬುದ್ದಿಮಾತು ಹೇಳಿದ್ದಾರೆ.

ಅರುಣ್ ಎಂಬ ಹೊಸಕೋಟೆಯ ಹುಡುಗ ತಮ್ಮ ಕೈ ಮೇಲೆ ರಕ್ತದಲ್ಲಿ ಕಿಚ್ಚ ಎಂದು ಬರೆದುಕೊಂಡಿದ್ದ. ಕೈ ಕೊಯ್ದುಕೊಂಡು, ಅದರ ಮೇಲೆ ಹರಿಶಿಣ ಹಾಕಿ ಫೋಟೋ ತೆಗೆದು ಸುದೀಪ್‍ಗೆ ಟ್ವೀಟ್ ಮಾಡಿದ್ದ. ಇದಕ್ಕೆ ಕಿಚ್ಚ ಸುದೀಪ್ ಬುದ್ದಿಮಾತು ಹೇಳಿದ್ದಾರೆ.

ನಿಮ್ಮ ಅಭಿಮಾನ, ಪ್ರೀತಿಗೆ ಚಿರಋಣಿ. ಆದರೆ, ಅಭಿಮಾನವನ್ನು ವ್ಯಕ್ತಪಡಿಸಲು ಬೇರೆ ಬೇರೆ ದಾರಿಗಳಿವೆ. ನಿಮ್ಮನ್ನೇ ನೀವು ಕತ್ತರಿಸಿಕೊಳ್ಳುವಂತಹ ಪ್ರೀತಿಯ ಅಭಿಮಾನ ಬೇಡ. ದಯವಿಟ್ಟು ಇನ್ನೊಮ್ಮೆ ಇಂತಹ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

ಇದು ಸುದೀಪ್‍ಗೆ ಹೊಸದೇನೂ ಅಲ್ಲ. ರಕ್ತದಲ್ಲಿ ಪತ್ರ ಬರೆಯುವ ಯಾವ ಅಭಿಮಾನಿಯನ್ನೂ ಸುದೀಪ್ ಪ್ರೋತ್ಸಾಹಿಸುವುದಿಲ್ಲ. ಬದಲಿಗೆ ಪ್ರತಿಯೊಬ್ಬರಿಗೂ ಬುದ್ದಿಮಾತು ಹೇಳುತ್ತಾರೆ. ಸುದೀಪ್‍ರ ಆ ಅಭಿಮಾನಿಗೆ, ಕಿಚ್ಚನ ಬೇರೆ ಅಭಿಮಾನಿಗಳು ಕೂಡಾ ಬುದ್ದಿ ಹೇಳಿದ್ದಾರೆ. ಬೇಕಾದರೆ ರಕ್ತದಾನ ಮಾಡು ಎಂದು ಸಲಹೆ ಕೊಟ್ಟಿದ್ದಾರೆ. ಕಿಚ್ಚನ ಆ ಅಭಿಮಾನಿ ಅರುಣ್ ಕೂಡಾ ಥ್ಯಾಂಕ್ಯೂ ಅಣ್ಣ. ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಎಂದು ಹೇಳಿದ್ದಾನೆ.

 

#

Gubbi Mele Bramhastra Movie Gallery

Rightbanner02_gimmick_inside

Nanna Prakara Audio Release Images