` ಕನ್ನಡ ಓದಬಲ್ಲ.. ಆದರೆ, ಮಾತನಾಡುವುದೇ ಕಷ್ಟ - ಹೀಗೆಂದ ನಟ ಯಾರು ಗೊತ್ತಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rana can read kannada
Rana Daggubathi Image

ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ ನಟ, ನಟಿಯರೇ, ಕನ್ನಡದಲ್ಲಿ ಓದೋಕೆ ಬರಲ್ಲ ಎಂದು ಯಾವುದೇ ಸಂಕೋಚವಿಲ್ಲದೆ ಹೇಳುತ್ತಾರೆ. ಕರ್ನಾಟಕದಲ್ಲೇ ವರ್ಷಗಟ್ಟಲೆ ಇದ್ದುಕೊಂಡು ಕನ್ನಡ ಮಾತನಾಡಲು ಬರದವರಿದ್ದಾರೆ. ಇಂಥವರ ಮಧ್ಯೆ ಇಲ್ಲೊಬ್ಬ ನಟ ಡಿಫರೆಂಟ್ ಎನ್ನಿಸಿದ್ದಾರೆ. ಆ ನಟ ರಾಣಾ ದಗ್ಗುಬಾಟಿ.

ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದರು. ಕನ್ನಡ ಚಿತ್ರಗಳಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ನಟಿಸಲು ಸಿದ್ಧ ಎಂದ ರಾಣಾ, ಆಗಲೇ ಈ ವಿಷಯ ಬಹಿರಂಗಪಡಿಸಿದ್ದು. ರಾಣಾ ಅವರ ಮನೆ ಮಾತು ತಮಿಳು. ತೆಲುಗೂ ಕೂಡಾ ಬರುತ್ತೆ. ಹಿಂದಿ ಮತ್ತು ಇಂಗ್ಲಿಷ್ ಜೊತೆ ಕನ್ನಡವನ್ನೂ ಓದುತ್ತಾರಂತೆ ರಾಣಾ. 

ನಾನು ಕನ್ನಡವನ್ನು ಓದಬಲ್ಲೆ. ಓದುವುದನ್ನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ಮಾತನಾಡಲು ಬರುವುದಿಲ್ಲ. ಬರುವುದಿಲ್ಲ ಎಂದರೆ ಸ್ವಲ್ಪ ಕಷ್ಟಪಟ್ಟು ಮಾತನಾಡಬಲ್ಲೆ. ಸ್ಯಾಂಡಲ್‍ವುಡ್‍ನ ಮಿತ್ರರ ಜೊತೆ ನಾನು ಕನ್ನಡದಲ್ಲೇ ವ್ಯವಹರಿಸುವ ಪ್ರಯತ್ನ ಮಾಡುತ್ತಿರುತ್ತೇನೆ ಎಂದಿದ್ದಾರೆ ರಾಣಾ. 

ರಾಣಾ, ಇದುವರೆಗೆ ಕನ್ನಡದಲ್ಲಿ ನಟಿಸಿಲ್ಲ. ಆದರೂ ಕನ್ನಡ ಓದಲು ಕಲಿತಿರುವ ರಾಣಾ, ನಂಗೆ ಕನ್ನಡ್ ಗೊತ್ತಿಲ್ಲೆ ಎನ್ನುವವರಿಗೆ ಸ್ಫೂರ್ತಿಯಾಗಲಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery