` ಡ್ರಾಮಾ ಜ್ಯೂನಿಯರ್ಸ್‍ನಲ್ಲಿ ಬ್ರಾಹ್ಮಣರ ಅವಹೇಳನ - ಕ್ಷಮೆಯಾಚನೆಗೆ ಪಟ್ಟು ಹಿಡಿದ ಪೆಜಾವರ ಮಠ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
pejavar sree demanda apology
Vishwa Prasanna Swamy Image

ಡ್ರಾಮಾ ಜ್ಯೂನಿಯರ್ಸ್‍ನಲ್ಲಿ ಬ್ರಾಹ್ಮಣರ ಬಗ್ಗೆ, ಪೌರೋಹಿತ್ಯದ ಬಗ್ಗೆ ಅವಹೇಳನಕಾರಿಯಾಗಿ ನಾಟಕ ಪ್ರದರ್ಶಿಸಲಾಗಿದೆ ಎಂದು ಬ್ರಾಹ್ಮಣ ಸಮುದಾಯ ಸಿಡಿದೆದ್ದಿರುವುದು ಗೊತ್ತಿರುವ ವಿಚಾರ. ಕಾರ್ಯಕ್ರಮದ ಜ್ಯೂರಿಗಳು, ಝೀ ಟೀವಿಯ ನಿರ್ಮಾಪರಕ ಬಹಿರಂಗ ಕ್ಷಮೆಯಾಚನೆಗೆ ವೀಕ್ಷಕರು ಆನ್‍ಲೈನ್ ಕ್ಯಾಂಪೇನ್ ನಡೆಸಿದ್ದರು. ವಿವಾದ ಇಷ್ಟಕ್ಕೇ ತಣ್ಣಗಾಗುವ ಯಾವುದೇ ಸೂಚನೆ ಕಾಣುತ್ತಿಲ್ಲ. ಏಕೆಂದರೆ, ಈಗ ಝೀ ಟೀವಿಯರು ಕ್ಷಮೆ ಕೇಳಬೇಕು ಎನ್ನುತ್ತಿರುವುದು ಪೆಜಾವರ ಮಠ.

ಪೆಜಾವರ ಮಠದ ಹಿರಿಯ ಶ್ರೀಗಳಾದ ವಿಶ್ವೇಷ ತೀರ್ಥರು ವಿವಾದಕ್ಕೆ ಎಂಟ್ರಿಯಾಗಿಲ್ಲ. ಆದರೆ, ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ಸ್ವಾಮೀಜಿ, ಝೀಟೀಯವರು ಕ್ಷಮೆ ಕೇಳಬೇಕು ಎಂದಿದ್ದಾರೆ. 

ಉಡುಪಿಯಲ್ಲಿ ಯುವ ಬ್ರಾಹ್ಮಣ ಪರಿಷತ್ ಕರೆದಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ಸ್ವಾಮೀಜಿ, ತಪ್ಪು ಆಗಿ ಹೋಗಿದೆ. ಮುಂದಿನ ಕಾರ್ಯಕ್ರಮದಲ್ಲಿ ಕ್ಷಮೆ ಕೇಳಿ. ಇಲ್ಲದೇ ಹೋದರೆ ಪ್ರತಿಭಟನೆ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

ಪುಟ್ಟ ಮಕ್ಕಳಲ್ಲಿ ಕೆಟ್ಟ ಭಾವನೆ ತುಂಬಬಾರದು. ಅದು ಭಾರಿ ಅನಾಹುತಕ್ಕೆ ದಾರಿಯಾಗುತ್ತೆ ಎಂದು ಕಿವಿ ಮಾತು ಹೇಳಿದ್ದಾರೆ.

Related Articles :-

ಝೀ ಕನ್ನಡದ ಡ್ರಾಮಾ ಜ್ಯೂನಿಯರ್ಸ್ - ಪ್ರತಿಭಟನೆ ದಾಖಲಿಸಿದ ಬ್ರಾಹ್ಮಣ ಸಮುದಾಯ

Rambo 2 Movie Gallery

https://www.chitraloka.com/news/17774-heart-touching-song-on-mother-s-by-amma-i-love-you.html

Amma I Love You Movie Gallery