` ಕನ್ನಡದಲ್ಲಿ ತೆರೆಗೆ ಬರುತ್ತಿದೆ `ಗೋದ್ರಾ' - ಅದು ಗೋದ್ರಾ ಹತ್ಯಾಕಾಂಡದ ಕಥೇನಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
godhra image
Sathish Neenasam, Shraddha Srinath Image

ಗೋದ್ರಾ ಹತ್ಯಾಕಾಂಡ. ಭಾರತದ ಇತಿಹಾಸದ ಕರಾಳ ಘಟನೆ. ಚಲಿಸುತ್ತಿದ್ದ ರೈಲಿಗೆ ಬೆಂಕಿ ಹಚ್ಚಿ, ರೈಲಿನಲ್ಲಿದ್ದ 50ಕ್ಕೂ ಹೆಚ್ಚು ಆರ್‍ಎಸ್‍ಎಸ್ ಕಾರ್ಯಕರ್ತರನ್ನು ಕೊಲ್ಲಲಾಗಿತ್ತು. ಅದಕ್ಕೆ ಪ್ರತಿಯಾಗಿ ನಡೆದ ಗೋದ್ರೋತ್ತರ ಹಿಂಸಾಚಾರವಂತೂ ಇನ್ನೂ ಭೀಕರವಾಗಿತ್ತು. ಈ ಕುರಿತು ಇದುವರೆಗೆ ಬಾಲಿವುಡ್ ಕೂಡಾ ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿಲ್ಲ. ಅಂಥಾದ್ದರಲ್ಲಿ ಕನ್ನಡದಲ್ಲಿ ಗೋದ್ರಾ ಎಂಬ ಹೆಸರಿನ ಚಿತ್ರವೊಂದು ಸೆಟ್ಟೇರುತ್ತಿದೆ.

ನೀನಾಸಂ ಸತೀಶ್ ನಾಯಕರಾಗಿರುವ ಚಿತ್ರಕ್ಕೆ ಶ್ರದ್ಧಾ ಶ್ರೀನಾಥ್ ಹೀರೋಯಿನ್. ಜೇಕಬ್ ವರ್ಗಿಸ್ ಅವರ ಬಳಿ ಸಹಾಯಕರಾಗಿದ್ದ ನಂದೀಶ್ ಈ ಚಿತ್ರದ ನಿರ್ದೇಶಕ. ಅವರಿಗಿದು ಮೊದಲ ಪ್ರಯತ್ನ.

ಗೋದ್ರಾ ಎಂಬ ಹೆಸರಿದ್ದರೂ, ಚಿತ್ರದ ಕಥೆಗೂ, ಗೋದ್ರಾ ಹತ್ಯಾಕಾಂಡಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ ನಂದೀಶ್. ಆದರೆ, ತಮ್ಮ ಚಿತ್ರದ ಕಥೆಗೆ ಈ ಹೆಸರೇ ಸೂಕ್ತ ಎನ್ನುವ ಮೂಲಕ ಸಣ್ಣದೊಂದು ಗೊಂದಲ ಸೃಷ್ಟಿಸುತ್ತಾರೆ.

ಇದು ಪೊಲಿಟಿಕಲ್ ಡ್ರಾಮಾ ಎನ್ನುತ್ತಾರೆ ಶ್ರದ್ಧಾ. ಇದುವರೆಗೆ ಇಂಥಾದ್ದೊಂದು ಪ್ರಬುದ್ಧ ಪಾತ್ರ ಸಿಕ್ಕಿರಲಿಲ್ಲ ಎನ್ನುತ್ತಾರೆ ನೀನಾಸಂ ಸತೀಶ್. ನೋಡೋಣ.. ಚಿತ್ರದಲ್ಲಿ ಇನ್ನೂ ಏನೇನಿರುತ್ತೋ..?