ಝೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್ ಬ್ರಾಹ್ಮಣ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ. ಆಗಿದ್ದೇನೆಂದರೆ, ಡ್ರಾಮಾ ಜ್ಯೂನಿಯರ್ಸ್ನ ಭಾನುವಾರದ ಎಪಿಸೋಡ್ನಲ್ಲಿ ಗೃಹ ಪ್ರವೇಶಕ್ಕೆ ಬರುವ ಪುರೋಹಿತರು ಮಾಡುವ ಅವಾಂತರಗಳನ್ನು ಕಾಮಿಡಿಯಾಗಿ ಹೇಳಲಾಗಿತ್ತು. ಹಾಸ್ಯದ ಹೆಸರಲ್ಲಿ ಬ್ರಾಹ್ಮಣರನ್ನು ಅಪಹಾಸ್ಯ ಮಾಡಲಾಗಿದೆ ಎಂಬುದೇ ಬ್ರಾಹ್ಮಣ ಸಮುದಾಯದವರ ಆಕ್ರೋಶಕ್ಕೆ ಕಾರಣ.
ಝೀ ಕನ್ನಡ ವಾಹಿನಿ, ಜಡ್ಜ್ಗಳಾದ ಟಿ.ಎನ್. ಸೀತಾರಾಂ, ಲಕ್ಷ್ಮೀ, ವಿಜಯ್ ರಾಘವೇಂದ್ರ ಹಾಗೂ ಡ್ರಾಮಾದ ಸೃಷ್ಟಿಕರ್ತರ ವಿರುದ್ಧ ಬ್ರಾಹ್ಮಣ ಸಮುದಾಯ ತಿರುಗಿಬಿದ್ದಿದೆ.
ಬ್ರಾಹ್ಮಣರನ್ನು ಯಾರು, ಹೇಗೆ ಬೇಕಾದರೂ ಲೇವಡಿ ಮಾಡಬಹುದೇ..? ಬ್ರಾಹ್ಮಣರ ಲೇವಡಿ ಹೆಸರಲ್ಲಿ ಕಾಮಭಂಗಿಗಳನ್ನು ತೋರಿಸುವುದು ಸರಿಯೇ..? ಮಕ್ಕಳ ಕೈಯ್ಯಲ್ಲ ಅಶ್ಲೀಲ ಭಂಗಿ ತೋರಿಸುವ ಅಗತ್ಯವೇನಿತ್ತು..? ಇದು ಬ್ರಾಹ್ಮಣ ಸಮುದಾಯದವರ ಆಕ್ರೋಶ.
ಡ್ರಾಮಾ ಜ್ಯೂನಿಯರ್ಸ್ನವರು ಕ್ಷಮೆ ಕೇಳುವ ಅಗತ್ಯವಿಲ್ಲ. ಅವರು ತಪ್ಪೇ ಮಾಡಿಲ್ಲ ಎಂದು ವಾದಿಸುವವರ ಸಂಖ್ಯೆಗೂ ಕೊರತೆಯಿಲ್ಲ. ಒಟ್ಟಿನಲ್ಲೀಗ ಸಾಮಾಜಿಕ ಜಾಲತಾಣಗಳಲ್ಲಿ ಡ್ರಾಮಾ ಜ್ಯೂನಿಯರ್ಸ್ ಅತಿ ದೊಡ್ಡ ಚರ್ಚೆಯ ವಸ್ತುವಾಗಿದೆ.