` 50ನೇ ಚಿತ್ರದ ಹೊಸ್ತಿಲಲ್ಲಿ ಅವಕಾಶ ಕೊಟ್ಟವರನ್ನು ಮರೆಯಲಿಲ್ಲ ದರ್ಶನ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan honors mg rammurthy
Darshan Honors MG Rammurthy

ಕುರುಕ್ಷೇತ್ರ, ದರ್ಶನ್ ಅಭಿನಯದ 50ನೇ ಚಿತ್ರ. ಯಾವುದೇ ನಟನಿಗೆ 50ನೇ ಸಿನಿಮಾ ಎನ್ನುವುದು ಅತಿದೊಡ್ಡ ಮೈಲುಗಲ್ಲು. ದರ್ಶನ್ ಈ 50 ಚಿತ್ರಗಳ ಹಾದಿಯಲ್ಲಿ ಹಲವಾರು ಏಳುಬೀಳು ಕಂಡಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಫ್ಲಾಪ್‍ಗಳೂ ಆಗಿವೆ. ಆದರೆ, ಸೋಲು ಮತ್ತು ಗೆಲುವಿನ ಮಧ್ಯೆ ಚಾಲೆಂಜಿಂಗ್ ಸ್ಟಾರ್ ಬದಲಾಗಿಲ್ಲ. ದರ್ಶನ್ ಅವಕಾಶ ಕೊಟ್ಟವರನ್ನು ಮರೆತಿಲ್ಲ.

ಅದು ಮತ್ತೊಮ್ಮೆ ಸಾಬೀತಾಗಿದ್ದು ಕುರುಕ್ಷೇತ್ರ ಚಿತ್ರದ ಮುಹೂರ್ತದಲ್ಲಿ. ಮುಹೂರ್ತಕ್ಕೆ ಬಂದಿದ್ದ ಮೆಜೆಸ್ಟಿಕ್ ಚಿತ್ರದ ನಿರ್ಮಾಪಕ ಎಂ.ಜಿ. ರಾಮಮೂರ್ತಿಯವರನ್ನು ಪ್ರೀತಿಯಿಂದ ಮನೆಗೆ ಕರೆದುಕೊಂಡು ಹೋದ ದರ್ಶನ್, ಮನೆಯಲ್ಲಿ ಅವರಿಗೆ ಪುಟ್ಟ ಉಡುಗೊರೆ ನೀಡಿ ಸನ್ಮಾನಿಸಿದ್ದಾರೆ. 

ದರ್ಶನ್ ಈಗ ಚಾಲೆಂಜಿಂಗ್ ಸ್ಟಾರ್ ಇರಬಹುದು. ಆದರೆ ಅದಕ್ಕೆಲ್ಲ ಮುನ್ನುಡಿ ಬರೆದಿದ್ದು ದರ್ಶನ್. ಮೆಜೆಸ್ಟಿಕ್ ಇಲ್ಲದೇ ಹೋಗಿದ್ದರೆ, ದರ್ಶನ್ ಎಂಬ ಸ್ಟಾರ್ ಉದ್ಭವವಾಗುತ್ತಿರಲಿಲ್ಲ. ಆದರೆ, ಸ್ಟಾರ್ ಆದ ಮೇಲೂ ತನಗೆ ಅವಕಾಶ ಕೊಟ್ಟವರನ್ನು ಮರೆಯದೆ ಗೌರವಿಸುವ ಪ್ರೀತಿಸುವ ದೊಡ್ಡ ಗುಣ, ಎಲ್ಲರಿಗೂ ಇರುವುದಿಲ್ಲ.

#

Adi Lakshmi Purana Movie Gallery

Rightbanner02_butterfly_inside

Yaana Movie Gallery