` ಈ ಬಾರಿ ಕೆಪಿಎಲ್ ಆಡುತ್ತಿಲ್ಲ ಸುದೀಪ್ - ನಟ ಸುದೀಪ್​ ಕೆಎಸ್​ಸಿಎ ವಿರುದ್ಧ ಸಿಟ್ಟಾಗಿದ್ದೇಕೆ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rockstars team will not play in kpl
Rockstars team will not play in this KPL

ಇದು ಸುದೀಪ್ ಮತ್ತು ಕ್ರಿಕೆಟ್ ಎರಡನ್ನೂ ಆರಾಧಿಸುವ ಸುದೀಪ್ ಅಭಿಮಾನಿಗಳಿಗೆ ಬೇಸರದ ಸುದ್ದಿ. ಕಳೆದ ಬಾರಿ ಕೆಪಿಎಲ್​ನಲ್ಲಿ ಆಡಿ ಹವಾ ಸೃಷ್ಟಿಸಿದ್ದ ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ಸ್ ತಂಡ ಈ ಬಾರಿ ಕೆಪಿಎಲ್​ನಲ್ಲಿ ಆಡುತ್ತಿಲ್ಲ.  ಅವರ ತಂಡದ ಗುತ್ತಿಗೆಯನ್ನು ನವೀಕರಿಸಿಲ್ಲ ಎನ್ನುವ ಕಾರಣವನ್ನು ಕೆಎಸ್​ಸಿಎ ನೀಡಿದೆ.

ಆದರೆ ವಿಷಯ ಇದಲ್ಲ. ಸುದೀಪ್ ತಂಡವೇನೂ ಸ್ವತಃ ಸರಣಿಯಿಂದ ಹಿಂದೆ ಸರಿಯುತ್ತಿಲ್ಲ. ತಂಡದ ನಾಯಕ ಸುದೀಪ್​ಗಾಗಲೀ, ತಂಡದ ಮಾಲೀಕ ರಾಜುಗೌಡ ಅವರಿಗಾಗಲಿ ಮಾಹಿತಿಯನ್ನೇ ನೀಡದೆ ಕೆಎಸ್​ಸಿಎ, ರಾಕ್ ಸ್ಟಾರ್ಸ್ ತಂಡವನ್ನು ಟೂರ್ನಿಯಿಂದ ಹೊರಗಿಟ್ಟಿದೆ.

ಈ ಕುರಿತು ನಟ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ಸುದೀರ್ಘ ಪತ್ರದ ಮೂಲಕ ಬೇಸರ ಹೊರಹಾಕಿದ್ದಾರೆ.

‘‘ಕೆಪಿಎಲ್​ನಿಂದ ರಾಕ್ ಸ್ಟಾರ್ಸ್ ತಂಡವನ್ನು ಆಡಿಸದೆ ಇರುವುದು ತುಂಬಾ ಬೇಸರ ತಂದಿದೆ. ಕೆಪಿಎಲ್​ನಿಂದ ರಾಕ್ ಸ್ಟಾರ್ಸ್ ತಂಡವನ್ನು ಆಡದಂತೆ ಮಾಡಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ಧಾರ ಸರಿಯಲ್ಲ. ನಮಗೆ ಮಾಹಿತಿ ನೀಡಿ ಈ ನಿರ್ಧಾರ ಕೈಗೊಳ್ಳಬೇಕಿತ್ತು. ನನ್ನ ಜೊತೆಯಲ್ಲಾಗಲೀ ಅಥವಾ ತಂಡದ ಮಾಲೀಕ ರಾಜು ಗೌಡ ಜೊತೆ ಮಾತನಾಡಬೇಕಿತ್ತು. ನಮ್ಮನ್ನು ಸಂಪರ್ಕಿಸದೆ ರಾಕ್ ಸ್ಟಾರ್ಸ್ ತಂಡವನ್ನು ಕೆಪಿಎಲ್​ನಿಂದ ಹೊರಕ್ಕೆ ಹಾಕಿರುವುದು ಬೇಸರ ಮೂಡಿಸಿದೆ. ಕೆಎಸ್​ಸಿಎಗೆ ಮಾತಿಗೆ ಬೆಲೆ ಕೊಟ್ಟು ಕೆಪಿಎಲ್​ನಿಂದ ನಮ್ಮ ತಂಡ ಹಿಂದೆ ಸರಿದಿದೆ. ಕೆಪಿಎಲ್​ಗಾಗಿ ನಮ್ಮ ತಂಡ ಎಷ್ಟು ಕಷ್ಟಪಟ್ಟಿದೆ ಎನ್ನುವುದು ತಂಡದ ನಾಯಕನಾಗಿ ನನಗೆ ಗೊತ್ತು. ಪ್ರತಿ ವರ್ಷವೂ ಕೆಪಿಎಲ್​ನಲ್ಲಿ ಆಡಬೇಕು ಎಂಬುದು ನಮ್ಮ ಆಸೆಯಲ್ಲ. ಆದರೆ ನಮಗೆ ಉತ್ತಮ ವಿದಾಯ ಸಿಗಬೇಕಿತ್ತು’

- ಕಿಚ್ಚ ಸುದೀಪ್, ರಾಕ್ ಸ್ಟಾರ್ಸ್ ತಂಡದ ನಾಯಕ

Adhyaksha In America Success Meet Gallery

Ellidhe Illitanaka Movie Gallery