` ಬರೆಯಲು ಕುಳಿತರು ರಾಮಾಚಾರಿ, ರಾಜಕುಮಾರ ಸಂತೋಷ್ ಆನಂದ್ ರಾಮ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
santhosh anandaram image
santhosh anandaram

ಮೊದಲು ರಾಮಾಚಾರಿ. ಆನಂತರ ರಾಜಕುಮಾರ.. ಎರಡೂ ಚಿತ್ರಗಳು ಸೂಪರ್ ಡ್ಯೂಪರ್ ಹಿಟ್. ಹೀಗಾಗಿಯೇ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮುಂದಿನ ಚಿತ್ರ ಯಾವುದು ಎನ್ನುವ ಕುತೂಹಲ ಅಭಿಮಾನಿಗಳು ಮತ್ತು ಗಾಂಧಿನಗರದಲ್ಲಿ ಅಡ್ಡಾಡುತ್ತಲೇ ಇದೆ. ಮೊದಲು ಶಿವರಾಜ್ ಕುಮಾರ್, ನಂತರ ಸುದೀಪ್ ನಾಯಕತ್ವದ ಚಿತ್ರ ನಿರ್ದೇಶಿಸಲಿದ್ದಾರೆ ಎಂದು ಸುದ್ದಿಯಾಯಿತಾದರೂ, ನಂತರ ಅವರೇ ಅದನ್ನು ನಿರಾಕರಿಸಿದರು. ಆದರೆ, ಮುಂದೊಂದು ದಿನ ಇವರೊಂದಿಗೆ ಕೆಲಸ ಮಾಡುದ ಅತಿ ದೊಡ್ಡ ಕನಸಿದೆ ಎನ್ನುವ ಮೂಲಕ ಅಭಿಮಾನಿಗಳಿಗೂ ಬೇಸರ ಮಾಡಲಿಲ್ಲ.

ಈಗ ಸಂತೋಷ್ ಅನಂದ್ ರಾಮ್ ಚಿತ್ರದ ಸ್ಕ್ರಿಪ್ಟ್ ಕೆಲಸಕ್ಕೆ ಕುಳಿತಿದ್ದಾರೆ. ಟೀಂ ರೆಡಿಯಾಗಿ ಕುಳಿತು, ಕೆಲಸ ಮಾಡೋಕೆ ಶುರುವಾಗಿದೆ. ಒಂದು ಚಿತ್ರದಲ್ಲಿ ಸ್ಕ್ರಿಪ್ಟ್ ಕೆಲಸ ತುಂಬಾ ಮುಖ್ಯ. ಸ್ಕ್ರಿಪ್ಟ್ ಫೈನಲ್ ಆಗಿಬಿಟ್ಟರೆ, ಡೈರೆಕ್ಟರ್ ನಿರಾಳವಾಗಿಬಿಡ್ತಾರೆ. ಆದರೆ, ಬರೆಯಲು ಕೂತಿರುವುದನ್ನು ಫೋಟೋ ಸಮೇತ ಹೇಳಿರುವ ಸಂತೋಷ್, ಚಿತ್ರದ ಹೀರೋ ಯಾರು ಅನ್ನೋದನ್ನ ಮಾತ್ರ ಸೀಕ್ರೆಟ್ ಆಗಿಟ್ಟಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery