` ನಟನಾಗರಲು ರವಿಚಂದ್ರನ್ ಪುತ್ರನ ತಯಾರಿ - ರವಿಚಂದ್ರನ್ ಅವರಷ್ಟೇ ಡಿಫರೆಂಟು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ravichandran's son preparation for debut movieVikram, Ravichandran Image

ಇತ್ತೀಚೆಗೆ ಅದೊಂದು ಟ್ರೆಂಡ್ ಅಥವಾ ಸಂಪ್ರದಾಯವೇ ಆಗಿ ಹೋಗಿತ್ತು. ಹೊಸದಾಗಿ ಚಿತ್ರರಂಗಕ್ಕೆ ಬರುವವರನ್ನು ಏನು ಕಲಿತಿದ್ದೀರಿ, ಹೇಗೆ ತಯಾರಾಗಿದ್ದೀರಿ ಎಂದರೆ, ಕುದುರೆ ಸವಾರಿ ಕಲಿತಿದ್ದೇನೆ. ಕರಾಟೆ ಕಲಿತಿದ್ದೇನೆ. ಡ್ಯಾನ್ಸ್ ಪ್ರಾಕ್ಟೀಸ್ ಮಾಡಿದ್ದೇನೆ. ಜಿಮ್‍ಗೆ ಹೋಗಿ ಬಾಡಿ ವರ್ಕೌಟ್ ಮಾಡಿದ್ದೇನೆ ಎಂದು ಹೇಳುತ್ತಿದ್ದವರ ಸಂಖ್ಯೆಯೇ ಜಾಸ್ತಿಯಿತ್ತು. ಆದರೆ, ರವಿಚಂದ್ರನ್ ಪುತ್ರ ವಿಕ್ರಂ ಹಾಗಲ್ಲ. ರವಿಚಂದ್ರನ್ ಹೇಗೆ ಡಿಫರೆಂಟೋ ಅವರ ಮಗನೂ ಹಾಗೆಯೇ ಡಿಫರೆಂಟು. 

ಚಿತ್ರರಂಗಕ್ಕೆ ಬರುವ ಮುನ್ನ ಅವರು ಮಾಡಿಕೊಳ್ಳುತ್ತಿರುವ ತಯಾರಿ ಹೇಗಿದೆ ಗೊತ್ತಾ..? ಮೊದಲನೆಯದಾಗಿ ಕನ್ನಡ ಭಾಷೆಯ ಮೇಲೆ ಹಿಡಿತ ಸಾಧಿಸುವುದು. ಅದಕ್ಕಾಗಿ ಸಂಭಾಷಣೆಯನ್ನು ಸ್ಪಷ್ಟವಾಗಿ ಹೇಳುವುದು, ಏರಿಳಿತ, ಭಾವನೆಯನ್ನು ಅಭಿವೃಕ್ತಪಡಿಸುವುದನ್ನು ಅಭ್ಯಾಸ ಮಾಡುತ್ತಿದ್ದಾರಂತೆ.

ರಂಗಭೂಮಿಯಲ್ಲೂ ಕೆಲಸ ಮಾಡುತ್ತಿರುವ ವಿಕ್ರಂ, ನಾಟಕ ಮಾಡಲು ಆಗುತ್ತಿಲ್ಲ. ಆದರೆ, ರಂಗಭೂಮಿಯಲ್ಲಿ ಕೆಲಸ ಮಾಡುವ ರಾಜು ಎಂಬುಬವವರಿಂದ ಹಾಗೂ ನಿರ್ದೇಶಕ ನಾಗಶೇಖರ್ ಅವರಿಂದ ರಂಗಭೂಮಿಯ ಪಟ್ಟುಗಳನ್ನು ಕಲಿಯುತ್ತಿದ್ದಾರೆ. ವಾಯ್ಸ್ ಎಕ್ಸರ್‍ಸೈಜ್, ಮೂಗಿನಿಂದ ಮಾತನಾಡುವುದು, ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವುದು.. ಹೀಗೆ ಹಲವು ವಿಷಯಗಳನ್ನು ಹೇಳಿಸಿಕೊಳ್ಳುತ್ತಿದ್ದಾರಂತೆ. ಅದಕ್ಕಾಗಿ ಹೆಚ್ಚೆಚ್ಚು ಕನ್ನಡ ಸಿನಿಮಾಗಳನ್ನು ನೋಡುತ್ತಿದ್ದಾರಂತೆ. ಡ್ಯಾನ್ಸ್, ಫೈಟ್‍ನ್ನೂ ಪ್ರಾಕ್ಟೀಸ್ ಮಾಡುತ್ತಿದ್ದಾರೆ.

ಇಷ್ಟೆಲ್ಲ ತರಬೇತಿ ಯಾಕೆ ಎಂದರೆ ಉತ್ತರ, ಅವರು ರವಿಚಂದ್ರನ್ ಪುತ್ರ ಎನ್ನುವುದೇ. ರವಿಚಂದ್ರನ್ ಮಗ ಎನ್ನುವ ಕಾರಣಕ್ಕೇ ನಿರೀಕ್ಷೆ ಹೆಚ್ಚಾಗಿರುತ್ತೆ. ಆ ನಿರೀಕ್ಷೆಯನ್ನು ರೀಚ್ ಆಗಬೇಕೆಂದರೆ, ಸಿದ್ಧತೆಯೊಂದಿಗೆ ಬರಬೇಕು ಎನ್ನುತ್ತಾರೆ ವಿಕ್ರಂ. ನಾಗಶೇಖರ್ ನಿರ್ದೇಶನದಲ್ಲಿ ನಾನು ಅವಳು ಚಿತ್ರದಲ್ಲಿ ನಟಿಸುತ್ತಿರುವ ವಿಕ್ರಮ್, ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಚಿತ್ರ ಮಾಡುತ್ತಿದ್ದಾರೆ. ಚಿತ್ರ ನವೆಂಬರ್‍ನಲ್ಲಿ ಸೆಟ್ಟೇರಲಿದೆ.

Related Articles :-

Vikram's Film Titled As Naanu Avalu

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery