` ಕಿರಿಕ್ ಸಂಯುಕ್ತಾಗೆ ಅಭಿಮಾನಿಗಳ ತರಾಟೆ - ಡೋಂಟ್ ಕೇರ್ ಎಂದ ಸಂಯುಕ್ತಾ - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
samyuktha hegde image
Samyuktha Hegde Photos

ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತಾ ಹೆಗಡೆ, ಆಗಾಗ್ಗೆ ಏನಾದರೊಂದು ಕಾರಣಕ್ಕೆ ಕಿರಿಕ್ ಮಾಡಿಕೊಳ್ತಾನೇ ಇರ್ತಾರೆ. ಈಗಲೂ ಅಷ್ಟೆ, ವಿವಾದವಾಗಿರೋದು ಅವರೇ ಹಾಕಿಕೊಂಡ ಕೆಲವು ಫೋಟೋಗಳು. ಇಷ್ಟಕ್ಕೂ ಆಗಿರೋದು ಇಷ್ಟು. ಸಂಯುಕ್ತಾ ಹೆಗಡೆ, ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಒಂದಷ್ಟು ಗ್ಲಾಮರಸ್ ಫೋಟೋ ಹಾಕಿಕೊಂಡಿದ್ದಾರೆ. 

ಅದು ಕೆಲವು ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಹೀಗಾಗಿ ಹಲವರು ಸಂಯುಕ್ತಾಗೆ ಬಾಯಿಗೆ ಬಂದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವು ಕಮೆಂಟ್‍ಗಳು ಹದ್ದು ಮೀರಿವೆ ಕೂಡಾ. ಟೀಕಿಸುವಾಗ ಸಂಯುಕ್ತಾರ ಕುಟುಂಬವನ್ನೂ ಸೇರಿಸಿ ಟೀಕಿಸಿದ್ದಾರೆ. ಸಂಸ್ಕøತಿಯ ಪಾಠ ಹೇಳಿದ್ದಾರೆ.

ಆದರೆ ಇವುಗಳಿಗೆಲ್ಲ ಸಂಯುಕ್ತಾ ನೇರ..ದಿಟ್ಟ.. ಉತ್ತರ ಕೊಟ್ಟಿದ್ದಾರೆ. ನನ್ನ ಫೋಟೋ ಪೋಸ್ಟ್ ನನ್ನ ಹಕ್ಕು, ಅದಕ್ಕೆ ಪ್ರತಿಕ್ರಿಯೆ ಕೊಡೋದು ನನಗೆ ಇಷ್ಟವಿಲ್ಲ. ಇಂತಹ ಪ್ರತಿಕ್ರಿಯೆಗಳು ಬರುತ್ತವೆ ಅನ್ನೋದು ನನಗೆ ಗೊತ್ತು. ಇಷ್ಟಕ್ಕೂ ಆ ಫೋಟೋಗಳಲ್ಲಿ ಅಶ್ಲೀಲತೆಯೇನೂ ಇಲ್ಲ ಎಂದಿದ್ದಾರೆ ಸಂಯುಕ್ತಾ.

Chemistry Of Kariyappa Movie Gallery

BellBottom Movie Gallery