ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ನಟಿ ರಶ್ಮಿಕಾ ಮಂದಣ್ಣ, ಯಶ್‍ಗೆ ನಾಯಕಿಯಾಗಲಿದ್ದಾರಾ..? ಅಂಥಾದ್ದೊಂದು ಸುದ್ದಿ ಗಾಂದಿನಗರದಲ್ಲಿ ಓಡಾಡುತ್ತಿದೆ. ಈಗಾಗಲೇ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್‍ಮೆಂಟ್ ಮಾಡಿಕೊಂಡಿರುವ ರಶ್ಮಿಕಾ, ಅದಾದ ನಂತರ ಸಣ್ಣದೊಂದು ರಗಳೆಗೆ ಸಿಕ್ಕಿಕೊಂಡಿದ್ದರು. ಟಿವಿ ಶೋವೊಂದರಲ್ಲಿ ಯಶ್ ಅವರನ್ನು ತಮಾಷೆಯಾಗಿ ಶೋಅಫ್ ಎಂದಿದ್ದು, ನಂತರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ತಕ್ಷಣ ಕ್ಷಮೆಯಾಚಿಸಿದ್ದ ರಶ್ಮಿಕಾ, ಅದೇ ಸಂದರ್ಶನದಲ್ಲಿ ಯಶ್ ಬಗ್ಗೆ ಹೇಳಿದ್ದ ಒಳ್ಳೆಯ ಮಾತುಗಳನ್ನೂ ನೆನಪಿಸಿದ್ದರು. ಅಷ್ಟೇ ಅಲ್ಲ, ಯಶ್ ಪ್ರತಿಯೊಬ್ಬ ಕಲಾವಿದರಿಗೂ ಸ್ಫೂರ್ತಿ ಎಂದಿದ್ದರು. ಖುದ್ದು ಯಶ್ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಅಭಿಮಾನಿಗಳಿಗೆ ಬಿಟ್ಟುಬಿಡಿ ಎಂದು ಹೇಳಿದ ಮೇಲೆಯೇ ಆ ವಿವಾದ ತಣ್ಣಗಾಗಿದ್ದು.
ಈಗ ರಶ್ಮಿಕಾ, ಯಶ್ ಅವರ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಕೆಜಿಎಫ್ ಚಿತ್ರದಲ್ಲಿ ಬ್ಯುಸಿಯಾಗಿರುವ ಯಶ್, ನಂತರ ರಾಣಾ ಚಿತ್ರದಲ್ಲಿ ನಟಿಸಲಿದ್ದಾರೆ. ಆ ಚಿತ್ರದ ನಿರ್ದೇಶಕ ಹರ್ಷ.
ಅಂದಹಾಗೆ ಹರ್ಷ ನಿರ್ದೇಶನದ, ಪುನೀತ್ ರಾಜ್‍ಕುಮಾರ್ ಚಿತ್ರದಲ್ಲಿ ಕೂಡಾ ರಶ್ಮಿಕಾ ನಾಯಕಿ. ಅದೇ ಜೋಡಿ ಕಂಟಿನ್ಯೂ ಆದರೆ ಆಶ್ಚರ್ಯ ಪಡಬೇಕಿಲ್ಲ.
Related Articles :-