ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಸಿನಿಮಾ ಕುರುಕ್ಷೇತ್ರ ಪ್ರತಿದಿನವೂ ಕುತೂಹಲ ಮೂಡಿಸುತ್ತಿದೆ. ಚಿತ್ರದ ಬಹುತೇಕ ಪಾತ್ರಗಳು ಅಂತಿಮಗೊಂಡಿದ್ದರೂ, ಭೀಮ ಯಾರು ಎನ್ನುವುದು ಇನ್ನೂ ಫೈನಲ್ ಆಗಿರಲಿಲ್ಲ.
ಈಗ ಆ ಪಾತ್ರಕ್ಕೆ ಬಾಲಿವುಡ್ ಆಂಜನೇಯ ಡ್ಯಾನಿಶ್ ಅಖ್ತರ್ ಸೈಫಿ ಆಯ್ಕೆಯಾಗಿದ್ದಾರಂತೆ. ಆರೂವರೆ ಅಡಿ ಎತ್ತರದ ಡ್ಯಾನಿಶ್, 125 ಕೆಜಿ ತೂಕವಿದ್ದಾರೆ. ಸಿಯಾ ಕೇ ರಾಮ್ ಚಿತ್ರದಲ್ಲಿ ಆಂಜನೇಯನ ಪಾತ್ರ ಮಾಡಿದ್ದ ಡ್ಯಾನಿಶ್, ಬಾಲಿವುಡ್ ಆಂಜನೇಯ ಎಂದೇ ಫೇಮಸ್. ಆದರೆ, ಚಿತ್ರತಂಡ ಇನ್ನೂ ಡ್ಯಾನಿಶ್ರೇ ಭೀಮನ ಪಾತ್ರಧಾರಿನಾ ಎನ್ನುವುದನ್ನು ಫೈನಲ್ ಮಾಡಿಲ್ಲ. ಚಿತ್ರ ಜುಲೈ 30ರಂದು ಸೆಟ್ಟೇರುತ್ತಿದೆ.
Related Articles :-
Kurukshetra To be Launched on July 30th
ದರ್ಶನ್ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು
ಕುರುಕ್ಷೇತ್ರದಲ್ಲಿ ಹರಿಪ್ರಿಯ ದ್ರೌಪದಿಯಲ್ಲ..!
Haripriya Confirmed For Kurukshetra
ವದಂತಿಗಳಿಗೆ ಕಿವಿಗೊಡಬೇಡಿ - ದರ್ಶನ್ ಕುರುಕ್ಷೇತ್ರದಲ್ಲಿ ನಟಿಸೋದು ಪಕ್ಕಾ