` ಸಂಜನಾ ವಿಡಿಯೋ ಲೀಕ್ ಮಾಡಿದ್ದು ನಾನಲ್ಲ - ಭಗವದ್ಗೀತೆ ಮೇಲೆ ಪ್ರಮಾಣ ಮಾಡಿದ ನಿರ್ದೇಶಕ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
srinivas raju
Srinivas Raju Image

ನಟಿ ಸಂಜನಾ ಅವರು ನಟಿಸಿರುವ 2 ಚಿತ್ರದ ನಗ್ನ ವಿಡಿಯೋ ಲೀಕ್ ಪ್ರಕರಣ ಫಿಲ್ಮ್ ಚೇಂಬರ್ ಮೆಟ್ಟಿಲೇರಿದೆ. ವಿಡಿಯೋ ಕುರಿತಂತೆ ಫಿಲ್ಮ್ ಚೇಂಬರ್​ನಲ್ಲಿ ಇಂದು ಸಭೆ ನಡೆಸಲಾಯಿತು. ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚಿತ್ರದ ನಿರ್ದೇಶಕ ಶ್ರೀನಿವಾಸ ರಾಜು ವಿವರಣೆ ನೀಡಿದರು. 

ಶ್ರೀನಿವಾಸ ರಾಜು ಅವರ ವಿವರಣೆ ಕೇಳಿದ ಸಾ.ರಾ. ಗೋವಿಂದು, ಈ ಕುರಿತು ಸೈಬರ್ ಕ್ರೈಂನವರಿಗೆ ದೂರು ನೀಡಲು ಸೂಚನೆ ನೀಡಿದರು. ನಿರ್ದೇಶಕರಿಂದಲೇ ವಿಡಿಯೋ ಲೀಕ್ ಆಗಿದ್ದು ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು.

ನಂತರ ಮಾತನಾಡಿದ ಶ್ರೀನಿವಾಸ ರಾಜು, ಸೆನ್ಸಾರ್​ನವರು ಸೂಚಿಸಿದ್ದಂತೆ ದೃಶ್ಯವನ್ನು ಎಡಿಟ್ ಮಾಡಲಾಗಿತ್ತು. ಚಿತ್ರಕ್ಕೆ ಅಗತ್ಯವಿದ್ದುದರಿಂದ ಶೂಟ್ ಮಾಡಿದ್ದೆವು. ಆದರೆ, ಆ ವಿಡಿಯೋ ಹೇಗೆ ಲೀಕ್ ಆಯಿತು ಎಂದು ನನಗೂ ಗೊತ್ತಿಲ್ಲ. ಭಗವದ್ಗೀತೆ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ವಿಡಿಯೋ ಲೀಕ್​ಗೂ ನನಗೂ ಸಂಬಂಧವಿಲ್ಲ. ಸೈಬರ್ ಕ್ರೈಂಗೂ ದೂರು ಕೊಡುತ್ತೇನೆ. ನನ್ನ ತಪ್ಪು ಎಂದೇನಾದರೂ ಸಾಬೀತಾದರೆ, ಚೇಂಬರ್ ತೆಗೆದುಕೊಳ್ಳುವ ಯಾವುದೇ ಕ್ರಮವನ್ನಾದರೂ ಪಾಲಿಸುತ್ತೇನೆ ಎಂದರು. 

ಚೇಂಬರ್ ಸಭೆಯ ನಂತರವೂ ವಿಡಿಯೋ ಲೀಕ್ ಮಾಡಿದ್ದು ಯಾರು ಎನ್ನುವುದು ಬಹಿರಂಗವಾಗಲೇ ಇಲ್ಲ.