` ಬಿಗ್ ಬಾಸ್ ಪ್ರಥಮ್ ಹುಚ್ಚಾಟ - ಆತ ‘ಪ್ರೀತ್ಸೆ’ ಚಿತ್ರದ ಉಪೇಂದ್ರನಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
preethse incident recalls
Pratham Bite Incident Recalls Preethse

ಬಿಗ್​ಬಾಸ್ ಪ್ರಥಮ್ ಕೆಟ್ಟ ಕಾರಣಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಮೊದಲು ಬಿಗ್​ಬಾಸ್ ವಿನ್ನರ್ ಆಗಿ, ನಂತರ ಪ್ಲೇಬಾಯ್ ಆಗಿ, ಮತ್ತೊಮ್ಮೆ ಸೂಸೈಡ್ ಸ್ಟಾರ್​ ಆಗಿ, ಈಗ ಬಿಗ್ ಬಾಸ್ ಸ್ಟಾರ್ ಆಗಿದ್ದಾರೆ. ಆದರೆ, ವಿಷಯ ಇದಲ್ಲ. ಇಡೀ ಪ್ರಕರಣದಲ್ಲಿ ಪ್ರಥಮ್, ಭುವನ್ ಮತ್ತು ಸಂಜನಾ ಕಥೆ ಕೇಳುತ್ತಿದ್ದರೆ, ಮತ್ತೆ ಮತ್ತೆ ನೆನಪಾಗುತ್ತಿರುವುದು ಪ್ರೀತ್ಸೆ ಸಿನಿಮಾ.

ನಿಮಗೆಲ್ಲ ಗೊತ್ತಿರುವಂತೆ ಪ್ರೀತ್ಸೆ ಸಿನಿಮಾ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ಸೋನಾಲಿ ಬೇಂದ್ರೆ ನಟಿಸಿದ್ದ ಸಿನಿಮಾ 2000ನೇ ಇಸವಿಯಲ್ಲಿ ಬಂದಿದ್ದ ಆ ಚಿತ್ರದ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್. ನಿರ್ದೇಶಕ ಡಿ. ರಾಜೇಂದ್ರ ಬಾಬು.

ಆ ಚಿತ್ರದಲ್ಲಿ ಉಪೇಂದ್ರ ಕಿ.ಕಿ..ಕಿರಣ್ ಎನ್ನುತ್ತಲೇ ಸೋನಿಯಾ ಬೇಂದ್ರೆಯನ್ನು ಕಾಡುತ್ತಾರೆ. ಪ್ರೀತಿಯನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗದ ಕೀಳರಿಮೆ ವ್ಯಕ್ತಿತ್ವದ ಪಾತ್ರದಲ್ಲಿ ಉಪೇಂದ್ರ ಮನೋಜ್ಞವಾಗಿ ನಟಿಸಿದ್ದರು. ಆಕೆಯಿಂದ ಸೋನಾಲಿಯನ್ನು ರಕ್ಷಿಸುವ ಪಾತ್ರ ಶಿವರಾಜ್ ಕುಮಾರ್​ ಅವರದ್ದು. 

ಇಲ್ಲಿ ಪ್ರಥಮ್ ಕಚ್ಚಾಟದ ಸ್ಟೋರಿಯಲ್ಲೂ ಇಂಥದ್ದೇ ಕಥೆಯ ನೆರಳು ಕಾಣುತ್ತಿದೆ. ಭುವನ್, ಪ್ರಥಮ್ ಮತ್ತು ಸಂಜನಾ ಮೂವರ ಮಾತನ್ನೂ ಕೇಳಿದಾಗ ಗೊತ್ತಾಗುವುದೇನೆಂದರೆ, ಸಂಜನಾಗೆ ಪ್ರಥಮ್ ಕಂಡರೆ ಆಗಲ್ಲ. ಪ್ರಥಮ್​ಗೆ, ಅದೇ ಸಂಜನಾ ಭುವನ್ ಜೊತೆಯಲ್ಲಿದ್ದರೆ ತಡೆದುಕೊಳ್ಳಲಾಗದ ಅಸಹನೆ. ಆ ಅಸಹನೆ ಈಗ ಕಚ್ಚಾಟದ ಮೂಲಕ ಹೊರಬಿದ್ದಿದೆ. ಪ್ರಥಮ್, ಸಂಜನಾ ಮೇಲೆ ವಿಪರೀತ ಎನ್ನುವಷ್ಟು ಪೊಸೆಸಿವ್ ಆಗಿದ್ದಾರಾ..? ಅದು ಪ್ರೀತಿನಾ..? ಗೊತ್ತಿಲ್ಲ. ಆದರೆ, ಸಂಜನಾರನ್ನು ಪ್ರಥಮ್​ರಿಂದ ರಕ್ಷಿಸುವಂತಹ ಕೆಲಸ ಮಾಡುತ್ತಿರುವುದು ಭುವನ್. 

ಈ ಪ್ರಕರಣ ಎಲ್ಲಿಗೆ ಹೋಗಿ ಅಂತ್ಯ ಕಾಣುತ್ತೋ ಗೊತ್ತಿಲ್ಲ. ಸದ್ಯಕ್ಕಂತೂ ಈ ಪ್ರಕರಣದಲ್ಲಿ ಹೊರಗೆ ಕಾಣದೇ ಹೋದರೂ ನರಳುತ್ತಿರುವುದು ನಟಿ ಸಂಜನಾ. ಥೇಟು ಪ್ರೀತ್ಸೆ ಚಿತ್ರದ ಸೋನಾಲಿ ಬೇಂದ್ರೆಯ ಹಾಗೆ.

Related Articles :-

ಸೈಕೋ ಪ್ರಥಮ್​ಗೆ ಶಿಕ್ಷೆಯಾಗಲಿ ಎಂದರು ಹರ್ಷಿಕಾ ಪೂಣಚ್ಚ

Is Pratham The New Venkat?

ಬಿಗ್​ಬಾಸ್ ಪ್ರಥಮ್​ಗೆ ಷರತ್ತುಬದ್ಧ ಜಾಮೀನು - ನ್ಯಾಯಾಧೀಶರಿಂದ ಬುದ್ಧಿವಾದ

ತೊಡೆ ಕಚ್ಚಿದ ಪ್ರಥಮ್ ನ್ಯಾಯಾಲಯಕ್ಕೆ ಶರಣು

ಪೊಲೀಸರಿಗೂ ಸಿಕ್ಕದೆ ಬಿಗ್​ಬಾಸ್ ಪ್ರಥಮ್ ನಾಪತ್ತೆ - ಪ್ರಥಮ್ ವಿರುದ್ಧ ದೂರುಗಳು.. ಅಬ್ಬಬ್ಬಾ..!!!

Udaya Mehta Not Producimg Pratham Movie 

ಬಿಗ್ ಬಾಸ್ ಪ್ರಥಮ್ ಮತ್ತೊಮ್ಮೆ ಕಿರಿಕ್ - ಈ ಬಾರಿ ಗೆಳೆಯನ ತೊಡೆಯನ್ನೇ ಕಚ್ಚಿದ