` ಪೊಲೀಸರಿಗೂ ಸಿಕ್ಕದೆ ಬಿಗ್​ಬಾಸ್ ಪ್ರಥಮ್ ನಾಪತ್ತೆ - ಪ್ರಥಮ್ ವಿರುದ್ಧ ದೂರುಗಳು.. ಅಬ್ಬಬ್ಬಾ..!!! - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
pratham image
pratham absconding

ಬಿಗ್​ಬಾಸ್ ಪ್ರಥಮ್ ಸಹನಟ ಭುವನ್​ ತೊಡೆಗೇ ಕಚ್ಚಿ, ಟಿವಿ ನ್ಯೂಸ್​ನಲ್ಲಿ ಮಾತನಾಡಿ, ನಂತರ ನಾಪತ್ತೆಯಾಗಿ ಹೋಗಿದ್ದಾರೆ. ಆದರೆ, ಪ್ರಥಮ್ ಮೇಲೆ ಕಂಪ್ಲೇಂಟುಗಳ ಸರಮಾಲೆಯೇ ಬರತೊಡಗಿದೆ. 

ಸಂಜು ಮತ್ತು ನಾನು ಸೀರಿಯಲ್​ನಲ್ಲಿ ನಟಿಸುತ್ತಿದ್ದ ಪ್ರಥಮ್, ಸೀರಿಯಲ್​ನ ದೃಶ್ಯವೊಂದರಲ್ಲಿ ಸಂಜನಾ ಜೊತೆ ನಟಿಸಬೇಕಿತ್ತು. ಪ್ರಥಮ್ ಎಂದರೇನೇ ಉರಿದು ಬೀಳುತ್ತಿದ್ದ ನಟಿ ಸಂಜನಾ, ಆತನ ಕೈ ಮೇಲೆ ಕೈ ಇಟ್ಟು ಪ್ರಾಮಿಸ್ ಮಾಡುವ ದೃಶ್ಯಕ್ಕೂ ಒಲ್ಲೆ ಎಂದು ಕೂತುಬಿಟ್ಟಿದ್ದರು. ನಂತರ ಭುವನ್ ಹೇಳಿದ ಮೇಲೆ ಒಪ್ಪಿ ನಟಿಸಿದರಂತೆ. ಆದರೆ, ಅದಾದ ಮೇಲೆ ಇನ್ನಷ್ಟು ಕೆರಳಿದ ಪ್ರಥಮ್, ಈ ರೀತಿ ಹಲ್ಲೆ ನಡೆಸಿದ್ದಾರೆ ಎನ್ನುವುದು ಭುವನ್ ಪೊನ್ನಣ್ಣ ದೂರು.

ಸಂಜನಾಗೆ ಕೂಡಾ ಪ್ರಥಮ್ ವರ್ತನೆ ಇಷ್ಟವಾಗುತ್ತಿರಲಿಲ್ಲ. ಅವರಷ್ಟೇ ಅಲ್ಲ, ಸೀರಿಯಲ್ ತಂಡದ ಹಲವು ತಂತ್ರಜ್ಞರು, ಸಹ ಕಲಾವಿದರು ಪ್ರಥಮ್ ವರ್ತನೆಯ ಬಗ್ಗೆ ದೂರುಗಳ ಸರಮಾಲೆಯನ್ನೇ ಹೇಳುತ್ತಿದ್ದಾರೆ.

ಇದೆಲ್ಲದರ ಮಧ್ಯೆ ಭುವನ್, ಪ್ರಥಮ್ ವಿರುದ್ಧ ದೂರು ಕೊಟ್ಟಾಗಿದೆ. ಆದರೆ, ಪ್ರಥಮ್ ಇದುವರೆಗೆ ಪೊಲೀಸರಿಗೆ ಸಿಕ್ಕಿಲ್ಲ. ಎಲ್ಲಿದ್ದಾರೋ ಗೊತ್ತಿಲ್ಲ. 

ಇದೆಲ್ಲದರ ಮಧ್ಯೆ ಬಚ್ಚನ್ ಖ್ಯಾತಿಯ ಉದಯ್ ಮೆಹ್ತಾ ಅವರು ನನ್ನನ್ನು ಹೀರೋ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದಾರೆ ಎಂದಿದ್ದು, ನಂತರ ಅದನ್ನು ಉದಯ್ ಮೆಹ್ತಾ ನಿರಾಕರಿಸಿದ್ದು ಪ್ರಥಮ್ ಹುಚ್ಚಾಟಕ್ಕೆ ಇನ್ನೊಂದು ಉದಾಹರಣೆಯಷ್ಟೆ. 

ಪ್ರಥಮ್ ವಿರುದ್ಧದ ದೂರುಗಳ ಲಿಸ್ಟು ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಆತನ ಜೊತೆ ಕೆಲಸ ಮಾಡಿರುವವರು ನೀಡುತ್ತಿರುವ ಸಲಹೆಯೇನು ಗೊತ್ತೇ, ಪ್ರಥಮ್​ಗೆ ಒಬ್ಬ ಒಳ್ಳೆಯ ಮಾನಸಿಕ ತಜ್ಞರಿಂದ ಕೌನ್ಸೆಲಿಂಗ್ ಮಾಡಿಸಬೇಕು ಎನ್ನುವುದು.

Related Articles :-

ಬಿಗ್ ಬಾಸ್ ಪ್ರಥಮ್ ಮತ್ತೊಮ್ಮೆ ಕಿರಿಕ್ - ಈ ಬಾರಿ ಗೆಳೆಯನ ತೊಡೆಯನ್ನೇ ಕಚ್ಚಿದ