` ಯಡಿಯೂರು ವಾರ್ಡ್​ನ ರಸ್ತೆಗೆ ಹೊಸ ನಾಮಕರಣ - ಪಾರ್ವತಮ್ಮ ರಾಜ್​ಕುಮಾರ್ ರಸ್ತೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
south end circle renamed as parvathamma rajkumar road
Parvathmma Rajkumar Road Inagurated

ಯಡಿಯೂರು ವಾರ್ಡ್‍ನ ಮಾಧವನ್‍ರಾವ್ ವೃತ್ತದಿಂದ ನಾಗಸಂದ್ರ ವೃತ್ತದವರೆಗಿನ ರಸ್ತೆಗೆ ಡಾ.ಪಾರ್ವತಮ್ಮ ರಾಜ್‍ಕುಮಾರ್ ರಸ್ತೆ ಎಂದು ನಾಮಕರಣ ಮಾಡಿ ರಸ್ತೆಯ ಫಲಕವನ್ನು ಅನಾವರಣ ಮಾಡಲಾಯಿತು. ನಟ ರಾಘವೇಂದ್ರ ರಾಜ್​ಕುಮಾರ್, ಪುತ್ರ ವಿನಯ್‍ ರಾಜ್‍ಕುಮಾರ್, ನಿರ್ಮಾಪಕ ಚಿನ್ನೇಗೌಡ, ರಾಜ್‍ಕುಮಾರ್ ಸಹೋದರಿ ನಾಗಮ್ಮ, ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂ ತ್‍ಕುಮಾರ್, ಉಪಮೇಯರ್ ಎಸ್.ಆನಂದ್, ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

parvathamma_rajkumar_road1_.jpgಇದೇ ರಸ್ತೆಯಲ್ಲಿ ಈ ಹಿಂದೆ ಶಾಂತಾ ಚಿತ್ರಮಂದಿರವಿತ್ತು. ರಾಜ್ ಬ್ಯಾನರ್​ನ 27 ಚಿತ್ರಗಳು ಶಾಂತಾ ಚಿತ್ರಮಂದಿರದಲ್ಲಿ ಶತದಿನೋತ್ಸವ ಆಚರಿಸಿರುವುದು ವಿಶೇಷ. ಪಾರ್ವತಮ್ಮನವರು ನಿಧನರಾದ ಎರಡೇ ತಿಂಗಳಲ್ಲಿ ಅವರ ಹೆಸರನ್ನು ಶಾಶ್ವತವಾಗಿಸುವ ಕೆಲಸ ಮಾಡಿದ್ದಕ್ಕೆ ಬಿಬಿಎಂಪಿಗೆ ರಾಘವೇಂದ್ರ ರಾಜ್​ಕುಮಾರ್ ಕೃತಜ್ಞತೆ ಸಲ್ಲಿಸಿದ್ರು. ಅಷ್ಟೇ ಅಲ್ಲ, ಇಡೀ ರಸ್ತೆಯ ಅಕ್ಕಪಕ್ಕದಲ್ಲಿ ಗಿಡಗಳನ್ನು ನೆಟ್ಟು, ಪೋಷಿಸಿ ರಸ್ತೆಯನ್ನು ಹಸಿರಾಗಿಸುವ ಕೆಲಸ ಮಾಡುತ್ತೇವೆ ಎಂಬ ಭರವಸೆ ನೀಡಿದರು.

ಅನಿವಾರ್ಯ ಕಾರಣಗಳಿಂದಾಗಿ ಶಿವರಾಜ್ ಕುಮಾರ್, ಪುನೀತ್ ರಾಜ್​ಕುಮಾರ್ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ರಸ್ತೆಗೆ ಪಾರ್ವತಮ್ಮ ರಾಜ್​ಕುಮಾರ್ ರಸ್ತೆ ಎಂದು ಹೆಸರಿಡುವುದಕ್ಕೆ ಬಿಬಿಎಂಪಿಯಲ್ಲಿ ಸರ್ವಸಮ್ಮತ ತೀರ್ಮಾನವಾಗಿದೆ. ಆದರೆ, ಇದುವರೆಗೂ ಸರ್ಕಾರಿ ಆದೇಶ ಹೊರಬಿದ್ದಿಲ್ಲ. ಬಿಬಿಎಂಪಿ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಕೊಟ್ಟಿದೆ. ಅದು ಇನ್ನೂ ಒಪ್ಪಿಗೆ ಪತ್ರ ನೀಡಿಲ್ಲ. ಹಾಗೆಂದು ಈ ರೀತಿ ಅನುಮತಿ ಪಡೆಯುವ ಮುನ್ನವೇ ರಸ್ತೆಗೆ ಹೊಸ ನಾಮಕರಣ ಮಾಡುವುದು ಹೊಸದೇನೂ ಅಲ್ಲ. ಹೀಗಾಗಿ ಸರ್ಕಾರಿ ಆದೇಶ ಹೊರಬೀಳುವ ಬಗ್ಗೆ ಬಿಬಿಎಂಪಿ ಕಾರ್ಪೊರೇಟರ್​ಗಳು ವಿಶ್ವಾಸ ಹೊಂದಿದ್ದಾರೆ.

Related Articles :-

ಸೌಥ್ ಎಂಡ್ ರಸ್ತೆ.. ನಾಳೆಯಂದ ಪಾರ್ವತಮ್ಮ ರಾಜ್‍ಕುಮಾರ್ ರಸ್ತೆ

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery