ರಚಿತಾ ರಾಮ್, ಸದ್ಯಕ್ಕೆ ಕನ್ನಡದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ನಟಿ. ಬುಲ್ ಬುಲ್ ಚಿತ್ರದಿಂದ ಎಂಟ್ರಿ ಕೊಟ್ಟ ರಚಿತಾ, ಈಗಾಗಲೇ ದರ್ಶನ್, ಸುದೀಪ್, ಪುನೀತ್, ಶ್ರೀಮುರಳಿ ಸೇರಿದಂತೆ ಹಲವು ಟಾಪ್ ನಟರ ಜೊತೆ ನಟಿಸಿದ್ದಾರೆ.
ಈಗ ಈ ಕನ್ನಡದ ಡಿಂಪಲ್ ಕ್ವೀನ್, ತೆಲುಗಿಗೆ ಹೊರಟಿದ್ದಾರಂತೆ. ಅದಕ್ಕೆಂದೇ ವಿಶೇಷ ಫೋಟೋಶೂಟ್ ಮಾಡಿಸಿರುವ ರಚಿತಾ, ಕೆಲವು ತೆಲುಗು ನಿರ್ಮಾಪಕರಿಂದ ಕಥೆಯನ್ನೂ ಕೇಳಿದ್ದಾರಂತೆ. ಸದ್ಯಕ್ಕೆ ಯಾವುದೂ ಫೈನಲೈಸ್ ಆಗಿಲ್ಲ.ಆದರೆ, ತೆಲುಗಿನಿಂದ ಆಫರ್ ಬಂದಿರುವುದು ನಿಜ ಎಂದಿದ್ದಾರೆ ರಚಿತಾ ರಾಮ್.
ಕನ್ನಡದಿಂದ ತೆಲುಗಿಗೆ ವಲಸೆ ಹೋದ ನಟಿಯರ ದೊಡ್ಡ ಲಿಸ್ಟೇ ಇದೆ. ಸೌಂದರ್ಯ, ಪ್ರೇಮಾ, ಪ್ರಿಯಾಮಣಿ, ರಕ್ಷಿತಾ ಮೊದಲಾದವರೆಲ್ಲ ತೆಲುಗಿನಲ್ಲೂ ಸ್ಟಾರ್ ಆಗಿ ಮಿಂಚಿದವರು. ಅಂಥದ್ದೇ ಅದೃಷ್ಟ ರಚಿತಾಗೂ ಒಲಿಯುತ್ತಾ..?