ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರವೇ ಕೊನೆ. ರಾಧಿಕಾ ಪಂಡಿತ್ ಅಭಿನಯದ ಯಾವ ಚಿತ್ರವೂ ಬಂದಿರಲಿಲ್ಲ. ಮದುವೆಯಾದ ನಂತರ ಚಿತ್ರರಂಗ ಬಿಟ್ಟರಾ ಎಂಬ ಪ್ರಶ್ನೆಗೆ ಮತ್ತೆ ನಟಿಸುತ್ತೇನೆ ಎನ್ನುತ್ತಿದ್ದರಾದರೂ, ಯಾವುದೇ ಹೊಸ ಚಿತ್ರ ಒಪ್ಪಿಕೊಂಡಿರಲಿಲ್ಲ. ಈಗ ಆ ಎಲ್ಲ ನಿರೀಕ್ಷೆಗಳಿಗೆ ಬ್ರೇಕ್ ಬಿದ್ದಿದೆ.
ರಾಧಿಕಾ ಪಂಡಿತ್ ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಹೊಸ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೀರೋ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ. ರಂಗಿತರಂಗ ನಂತರ ನಿರೂಪ್ ಭಂಡಾರಿ ನಟಿಸುತ್ತಿರುವ ಎರಡನೇ ಚಿತ್ರವೂ ಇದಾಗಲಿದೆ.
ಚಿತ್ರದ ಟೈಟಲ್, ಕಥೆ, ಬೇರೆ ತಂತ್ರಜ್ಞರು, ಕಲಾವಿದರ ಬಗ್ಗೆ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.