ನಟ, ಮಾಜಿ ಸಚಿವ ಅಂಬರೀಷ್ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಉಸಿರಾಟದ ತೊಂದರೆ ಎಂದು ಮೊದಲು ಹೇಳಲಾಗಿತ್ತು. ಆದರೆ, ಯಾವ ಸಮಸ್ಯೆಯೂ ಇಲ್ಲ. ಇದು ರೊಟೀನ್ ಚೆಕಪ್ ಅಷ್ಟೆ ಎಂದು ವಿಕ್ರಂ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಇನ್ನೂ ಎರಡು ದಿನ ಅಂಬರೀಷ್ ಆಸ್ಪತ್ರೆಯಲ್ಲೇ ಇರಲಿದ್ದಾರೆ. 6ರಿಂದ 10 ತಿಂಗಳ ಅವಧಿಯಲ್ಲಿ ಒಮ್ಮೆ ಕಂಪ್ಲೀಟ್ ಚೆಕಪ್ ಮಾಡಬೇಕು. ಈಗ ನಡೆಸುತ್ತಿರುವುದು ಅಂತಹ ರೊಟೀನ್ ಚೆಕಪ್ ಅಷ್ಟೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಅಂಬರೀಷ್ ಆಪ್ತಮೂಲಗಳೂ ಕೂಡಾ ಸ್ಪಷ್ಟಪಡಿಸಿವೆ.
Related Articles :-