ಜಾಗ್ವಾರ್ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ನಿಖಿಲ್ ಕುಮಾರಸ್ವಾಮಿ, ಕುರುಕ್ಷೇತ್ರ ಚಿತ್ರದ ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್, ಕುರುಕ್ಷೇತ್ರ ಚಿತ್ರದಲ್ಲಿ ಅಬಿಮನ್ಯು ಪಾತ್ರ ಮಾಡುತ್ತಿದ್ದಾರಂತೆ.
ನಾಗಣ್ಣ ನಿರ್ದೇಶನದ ಕುರುಕ್ಷೇತ್ರ ಚಿತ್ರಕ್ಕೆ ಪಾತ್ರಧಾರಿಗಳ ಆಯ್ಕೆಯೇ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಈಗಾಗಲೇ ಹರಿಪ್ರಿಯ ನರ್ತಕಿ ಪಾತ್ರದಲ್ಲಿ, ರೆಜಿನಾ ಭಾನುಮತಿ ಪಾತ್ರದಲ್ಲಿ ನಟಿಸುವುದು ಕನ್ಫರ್ಮ್ ಆಗಿದೆ.
ದ್ರೌಪದಿಯ ಪಾತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರ ಆಯ್ಕೆಯಾಗಿದೆ ಎನ್ನಲಾಗುತ್ತಿದೆ. ಹೆಸರು ಖಚಿತವಾಗಿಲ್ಲ. ಬಹುತೇಕ ಮುಗುಳ್ನಗೆ ಸುಂದರಿ ಸ್ನೇಹಾ ಆಯ್ಕೆಯಾಗುವುದು ಪಕ್ಕಾ ಎನ್ನಲಾಗುತ್ತಿದೆ.
ಇನ್ನು ಚಿತ್ರದಲ್ಲಿ ಶ್ರೀನಿವಾಸ ಮೂರ್ತಿ ದ್ರೋಣಾಚಾರ್ಯರ ಪಾತ್ರದಲ್ಲಿ ನಟಿಸುತ್ತಿದ್ದು, ಶ್ರೀನಾಥ್ ದೃತರಾಷ್ಟ್ರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸಾಯಿಕುಮಾರ್, ಶಶಿಕುಮಾರ್ಗೆ ಪಾತ್ರವಿದೆಯಂತೆ. ಯಾವ ಪಾತ್ರ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.
ಕುಂತಿಯ ಪಾತ್ರಕ್ಕೆ ಜ್ಯೂಲಿ ಲಕ್ಷ್ಮಿಯನ್ನು ಕೇಳಲಾಗಿದ್ದು, ಅವರಿನ್ನೂ ಕನ್ಫರ್ಮ್ ಮಾಡಿಲ್ಲ. ಒಟ್ಟಿನಲ್ಲಿ ದರ್ಶನ್ ದುರ್ಯೋಧನನಾಗಿ, ರವಿಚಂದ್ರನ್ ಶ್ರೀಕೃಷ್ಣನಾಗಿ ನಟಿಸುತ್ತಿರುವ ಚಿತ್ರ, ಸೆಟ್ಟೇರುವ ಮುನ್ನವೇ ಭರ್ಜರಿ ಸದ್ದು ಮಾಡುತ್ತಿದೆ.
ಚಿತ್ರ ಇದೇ ತಿಂಗಳು 29ರಂದು ಸೆಟ್ಟೇರಲಿದೆ.
Related Articles :-
ಕುರುಕ್ಷೇತ್ರದಲ್ಲಿ ಹರಿಪ್ರಿಯ ದ್ರೌಪದಿಯಲ್ಲ..!
Haripriya Confirmed For Kurukshetra
ವದಂತಿಗಳಿಗೆ ಕಿವಿಗೊಡಬೇಡಿ - ದರ್ಶನ್ ಕುರುಕ್ಷೇತ್ರದಲ್ಲಿ ನಟಿಸೋದು ಪಕ್ಕಾ
Vivek Oberoi in Kurukshetra Say Reports