ನಾವು ಕೆಲಸಕ್ಕೆ ಬಾರದ ಸಿಲ್ಲಿ ವಿಷಯಗಳಿಗಾಗಿ ದೇಶದೊಳಗೇ ಹೊಡೆದಾಡಿಕೊಳ್ಳುತ್ತಿದ್ದೇವೆ. ಅಲ್ಲಿ ಸಿಕ್ಕಿಂ ಗಡಿಯಲ್ಲಿ ಭಾರತೀಯ ಸೈನಿಕರು ಚೀನಾದಿಂದ ಯುದ್ಧದ ಬೆದರಿಕೆ ಎದುರಿಸ್ತಾ ಇದ್ದಾರೆ. ನಾವು ಇಸ್ರೇಲ್‍ನಿಂದ ಕಲಿಯಬೇಕಾದ್ದು ಬೇಕಾದಷ್ಟಿದೆ.
ಇದು ರಿಯಲ್ ಸ್ಟಾರ್ ಉಪೇಂದ್ರ ಮಾಡಿರುವ ಟ್ವೀಟ್. ಅದು ಪ್ರತ್ಯೇಕ ಕನ್ನಡ ಬಾವುಟದ ವಿಚಾರವಾ..? ಉಪೇಂದ್ರ ಅದನ್ನು ಸ್ಪಷ್ಟವಾಗಿ ಹೇಳಿಲ್ಲ. ಆದರೆ, ಅಭಿಮಾನಿಗಳು ಅರ್ಥ ಮಾಡಿಕೊಂಡಿರುವುದೇ ಹಾಗೆ. ಹಾಗೆ ಟ್ವೀಟ್ ಮಾಡಿದ ಅಭಿಮಾನಿಗಳಿಗೆ ಅದನ್ನು ನಿರಾಕರಿಸಲು ಕೂಡಾ ಉಪೇಂದ್ರ ಹೋಗಿಲ್ಲ.
ಅಷ್ಟೇ ಅಲ್ಲ, ಅದಾದ ಮೇಲೆ ಮುಂದುವರಿದು ಇನ್ನೂ ಒಂದು ಮಾತು ಹೇಳಿದ್ದಾರೆ. ನಾವು ಆಳಿಸಿಕೊಳ್ಳಲಷ್ಟೇ ಯೋಗ್ಯರು. ಆಳ್ವಿಕೆ ನಡೆಸೋದಿಕ್ಕ ಅಲ್ಲ ಎಂದಿದ್ದಾರೆ. ಅದು ಉಪೇಂದ್ರ ಅವರ ಬೇಸರ, ಹತಾಶೆಯ ಪರಮಾವಧಿ ಎನ್ನಬಹುದೇನೋ..? ಆದರೆ, ಎಂತಹ ಸಂದರ್ಭದಲ್ಲೂ ಪಾಸಿಟಿವ್ ಆಲೋಚನೆಯಲ್ಲೇ ಇರುವ ಉಪ್ಪಿ, ಸೈನಿಕರ ಆತ್ಮಸ್ಥೈರ್ಯ ಹೆಚ್ಚಳಕ್ಕಾಗಿ ಒಂದು ಸಲಹೆಯನ್ನೂ ಕೊಟ್ಟಿದ್ದಾರೆ.
``ನಾವು ಬಂದ್ ಮಾಡೋದಕ್ಕೆ ಫೇಮಸ್. ನಾವೇಕೆ ಒಂದು ದಿನ ಭಾರತ್ ಬಂದ್ ಮಾಡಿ, ಬೀದಿಗೆ ಬಂತು ಮೆರವಣಿಗೆ ಮಾಡಿ ಸೈನಿಕರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ನೀಡಬಾರದು'' ಇದು ಉಪೇಂದ್ರ ಕೇಳಿರುವ ಪ್ರಶ್ನೆ ಹಾಗೂ ಸಲಹೆ. ಉಪ್ಪಿಯ ಈ ಸಲಹೆ ನಿಮಗೆ ಇಷ್ಟವಾಗಬಹುದು.. ಅಥವಾ ಇಷ್ಟವಾಗದೇ ಹೋಗಬಹುದು. ನಿಮ್ಮ ಅಭಿಪ್ರಾಯ ತಿಳಿಸಲು ನೀವು ಸ್ವತಂತ್ರರು. ಅಭಿಪ್ರಾಯ ತಿಳಿಸಿ. ಆ ಅಭಿಪ್ರಾಯ ನಿಮ್ಮದೇ ಆಗಿರಲಿ.