` ಸಂಜನಾರ ಆ ವಿಡಿಯೋ ಗೊತ್ತಿಲ್ಲದೆ ಆದ ತಪ್ಪಂತೂ ಖಂಡಿತಾ ಅಲ್ಲ.! - ಹೇಗೆ ಗೊತ್ತಾ? - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
sanjana controversy
Sanjana Image

2 ಚಿತ್ರದ ಸಂಜನಾ ನಟಿಸಿದ್ದ ನಗ್ನ ವಿಡಿಯೋ ಕೋಲಾಹಲವನ್ನೇ ಸೃಷ್ಟಿಸಿಬಿಟ್ಟಿತು. ಇಡೀ ಚಿತ್ರರಂಗದ ಅನುಕಂಪದ ಕಣ್ಣೆಲ್ಲ ಸಂಜನಾ ಅವರ ಮೇಲೆಯೇ ಇತ್ತು. ಆದರೆ ರಿಯಾಲಿಟಿಯೇ ಬೇರೆ. ಅವರೇ ತೋರಿಸಿದ ಸಾಕ್ಷಿಯನ್ನು ನೋಡುವುದಾದರೆ, ಅವರಿಗೆ ಆ ದೃಶ್ಯದ ಶೂಟಿಂಗ್ ಆದ ಮೇಲೆ ಚಿತ್ರದಲ್ಲಿ ಅದು ಯಾವ ರೀತಿ ಬರಲಿದೆ ಎನ್ನುವ ಅರಿವು ಖಂಡಿತಾ ಇತ್ತು.

ಚಿತ್ರದ ಎಡಿಟಿಂಗ್ ವರ್ಷನ್ ನೋಡಿಲ್ಲದೇ ಹೋದರೂ, ಅವರು ಚಿತ್ರದ ರಷಸ್‍ನ್ನು ನೋಡಿದ್ದರು. ಚಿತ್ರದಲ್ಲಿ ನನ್ನನ್ನು ಬೆತ್ತಲೆಯಾಗಿ ತೋರಿಸುತ್ತಾರೆ ಎನ್ನುವುದು ನನಗೆ ಗೊತ್ತಿರಲಿಲ್ಲ ಎನ್ನುವ ಸಂಜನಾ ಮಾತಿನಲ್ಲಿ ಸಂಪೂರ್ಣ ಸತ್ಯವಿಲ್ಲ ಎನ್ನುವುದಂತೂ ಸತ್ಯ. ಏಕೆಂದರೆ ಬ್ಲೂ ಮ್ಯಾಟ್‍ನ್ನು ಎಲ್ಲ ಸೀನ್‍ಗಳಲ್ಲೂ ಹಾಕೋದಿಲ್ಲ ಎನ್ನುವುದು 10 ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ಸಂಜನಾಗೆ ಗೊತ್ತಿಲ್ಲದೇ ಇರುವ ವಿಚಾರವೇನೂ ಇಲ್ಲ. ಇನ್ನು ಒಟ್ಟಾರೆ ವಿವಾದದಲ್ಲಿ ಇದುವರೆಗೂ ಅಂಕೆಗೆ ಸಿಕ್ಕದಿರುವುದು ನಿರ್ದೇಶಕ ಶ್ರೀನಿವಾಸ ರಾಜು.

ಈಗ ಲೀಕ್ ಆಗಿರುವ ಆ ವಿಡಿಯೋಗಳು ಸೆನ್ಸಾರ್‍ನಲ್ಲಿ ಕತ್ತರಿಸಿದ್ದ ವಿಡಿಯೋಗಳೆನಾ..? ಅದು ಸೆನ್ಸಾರ್‍ನವರು ಕಟ್‍ಗೆ ಸೂಚಿಸಿದ್ದ ದೃಶ್ಯವೇನಾ..? ಆ ವಿಚಾರದ ಬಗ್ಗೆ ಶ್ರೀನಿವಾಸ ರಾಜು ಇನ್ನೂ ಬಾಯಿಬಿಟ್ಟಿಲ್ಲ. ಇನ್ನು ಅದು ಸೆನ್ಸಾರ್ ಮಂಡಳಿ ಮೆಟ್ಟಿಲನ್ನೂ ಹತ್ತಿಲ್ಲ ಎನ್ನುವ ಆರೋಪಗಳೂ ಇವೆ. ಹಾಗೇನಾದರೂ ಆಗಿದ್ದರೆ ಅದಕ್ಕೆ ಸ್ವತಃ ಉತ್ತರ ಹೇಳಬೇಕಾದ್ದು ಖುದ್ದು ಶ್ರೀನಿವಾಸ ರಾಜು. ಅಗತ್ಯವೇ ಇಲ್ಲದ ದೃಶ್ಯವನ್ನು ಶೂಟ್ ಮಾಡಿದ್ದಾದರೂ ಏಕೆ, ಅದನ್ನು ಎಡಿಟ್ ಮಾಡಿಸಿದ್ದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರ ಕೊಡಬೇಕಾಗುತ್ತೆ.

ಇನ್ನು ಇಡೀ ಚಿತ್ರತಂಡದ ಜವಾಬ್ದಾರಿ ಇನ್ನೊಂದಿದೆ. ಇಂತಹ ದೃಶ್ಯಗಳನ್ನು ಶೂಟ್ ಮಾಡುವಾಗ ಚಿತ್ರತಂಡದವರು ತಮ್ಮಲ್ಲೇ ಒಂದು ಬೌಂಡರಿ ಹಾಕಿಕೊಳ್ತಾರೆ. ಅಗತ್ಯ ಇಲ್ಲದ ಒಬ್ಬ ವ್ಯಕ್ತಿ ಕೂಡಾ ಆ ಸ್ಪಾಟ್‍ನಲ್ಲಿರುವುದಿಲ್ಲ. ನಂಬಿಕಸ್ಥ ವ್ಯಕ್ತಿಗಳಷ್ಟೇ ಇಂತಹ ದೃಶ್ಯದ ಶೂಟಿಂಗ್‍ನಲ್ಲಿರುತ್ತಾರೆ. ಇಷ್ಟಿದ್ದರೂ, ಈ ದೃಶ್ಯ ಲೀಕ್ ಆಗಿದೆ. ಅದು ಉದ್ದೇಶ ಪೂರ್ವಕವಾಗಿ ಆಯಿತಾ..? ಹಾಗೆ ಲೀಕ್ ಮಾಡಿದವರ ಉದ್ದೇಶವಾದರೂ ಏನಿತ್ತು? ನಿರ್ದೇಶಕ, ನಿರ್ಮಾಪಕರ ಉತ್ತರಿಸಲೇಬೇಕಾದ ಅನಿವಾರ್ಯತೆ ಇದೆ.